Header Ads
Header Ads
Breaking News

ಆಳ್ವಾಸ್ ವಿರಾಸತ್-2018 ಸಾಂಸ್ಕೃತಿಕ ಉತ್ಸವ ಜ.12 ರಿಂದ 14 ರ ವರೆಗೆ ನಡೆಯಲಿರುವ ಕಾರ್ಯಕ್ರಮ ವಿರಾಸತ್ ಉದ್ಘಾಟನೆಗೆ ನಾಗಾಲ್ಯಾಂಡ್ ರಾಜ್ಯಪಾಲರು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ತನ್ನ 24 ನೇ ವರ್ಷಾಚರಣೆಯ ಸಮಭ್ರಮದಲ್ಲಿದೆ. ಈ ವರ್ಷದ ‘ಆಳ್ವಾಸ್ ವಿರಾಸತ್’ ಕಾರ್ಯಕ್ರಮಗಳು ಜನವರಿ 12 ರಿಂದ 14 ರವರೆಗೆ ಮೂರು ದಿನಗಳ ಕಾಲ ಮೂಡುಬಿದಿರೆಯ ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್ ಆವರಣದಲ್ಲಿ ಅದ್ದೂರಿಯಿಂದ ನಡೆಯಲಿವೆ.

ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿವೆ. 150 ಅಡಿ ಉದ್ದ, 60 ಅಡಿ ಅಗಲದ ಈ ಬೃಹತ್ ವೇದಿಕೆಯು ಆಳ್ವಾಸ್‌ವಿರಾಸತ್‌ನಂಥಾ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೇಳಿಮಾಡಿಸಿದಂತಿದ್ದು ಕಲಾವಿದರ ಪ್ರದರ್ಶನಕ್ಕೂ ಸಹೃದಯದ ಆಸ್ವಾದನೆಗೂ ಅನುಕೂಲಕರವಾಗಿದೆ. ಆಳ್ವಾಸ್ ವಿರಾಸತ್ 2018 ನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿರುವ ಶ್ರೀ ಪಿ.ಬಿ.ಆಚಾರ್ಯರು ಉದ್ಘಾಟನೆ ಮಾಡಲಿದ್ದಾರೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ಪದ್ಮಭೂಷಣ ಪಂಡಿತ್ ರಾಜನ್‌ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ 2018 ರ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಶ್ರೀಮತಿ ಶೋಭಾ ಬ್ರೂಟಾ ಅವರಿಗೆ 2018 ರ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಆಳ್ವಾಸ್ ವಿರಾಸತ್ 2018 ರ ಮೊದಲದಿನ ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನಲೆಗಾಯಕರಾದ ಶ್ರೀ.ಕೆ.ಕೆ.ಮತ್ತುತಂಡದಿಂದ ‘ಸಂಗೀತ ರಸಸಂಜೆ’ ನಡೆಯಲಿದ್ದು ಜನವರಿ 13 ರಂದು ಬಹುಭಾಷಾ ಹಿನ್ನೆಲೆಗಾಯಕ, ಸಂಗೀತ ನಿರ್ದೇಶಕರಾಗಿ ಜನಮನ್ನಣೆಗಳಿಸಿರುವ ಶ್ರೀ ಶಂಕರಮಹದೇವನ್-ಎಹ್ಸಾನ್-ಲೋಯ್ ಮತ್ತು ಸಿದ್ಧಾರ್ಥಮಹದೇವನ್ ತಂಡವು ‘ಸುಮಧುರ ಸಂಗೀತ’ದ ಮೂಲಕ ಜನಮನಸೂರೆಗೊಳ್ಳಲಿದೆ. ಅದನ್ನನುಸರಿಸಿ ಬಿ.ಎಸ್.ಆನಂದ್, ಪನ್ನಗಶರ್ಮ, ಕೃಷ್ಣ ಪವನ್‌ಕುಮಾರ್, ಸುಮುಖ ಕಾರಂತರಂಥಾ ಪ್ರಸಿದ್ಧ ಮೃದಂಗ ವಾದಕರು ಸಂಗೀತಪ್ರೇಮಿಗಳನ್ನು ತಮ್ಮ ಕೈಚಳಕದ ಮೂಲಕ ಮಂತ್ರಮುಗ್ಧಗೊಳಿಸಲಿದ್ದಾರೆ.