
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2020/21 ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಈ ಸಂಸ್ಥೆಯ ವಿದ್ಯಾರ್ಥಿಗಳಾದ ಜ್ಞಾನಾಮೃತ, ಅಮೋಘ ಹೆಗ್ಡೆ, ತ್ರಿಶಾಜಯರಾಮ್, ಕೌಸ್ತುಭಾ, ಮನ್ವಿತಾ, ಸನ್ಮಿತಾ.ಎಸ್, ಅಥರ್ವ ಹೆಗ್ಡೆ ಕೆ, ಇಬ್ಬನಿ ಸಂದೀಪ್, ಶ್ರೇಯಾ ವಿ. ಕುಂಬಾರ್, ಗಾನಶ್ರೀ ಜೈನ್, ಲಾವಣ್ಯ, ಮತ್ತುಇಂಚರಾ ಜಿ.ಸಿ, ಇವರೆಲ್ಲಾ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡ.100 ಫಲಿತಾಂಶ ದಾಖಲಿಸಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳು ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಮತ್ತುಕುಮಾರಿ ಕಲಾಶ್ರೀ ಅವರಲ್ಲಿ ತರಬೇತಿ ಪಡೆದಿರುತ್ತಾರೆ.ಸಂಸ್ಥೆಯ ಸಾಧಕ ವಿದ್ಯಾರ್ಥಿಗಳನ್ನು ಮತ್ತು ತರಬೇತಿದಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಡಾ|| ಎಂ. ಮೋಹನ್ ಆಳ್ವಾರು ಅಭಿನಂದಿಸಿದ್ದಾರೆ.