Header Ads
Breaking News

ಆಶಾ ನಿಲಯದಲ್ಲಿ ವಿವಿಧ ಸಂಘಸಂಸ್ಥೆಗಳಿಂದ ಅಂತರಾಷ್ಟ್ರೀಯ ಕ್ರೀಡಾಪಟು ಶುಭಂ ಶೆಟ್ಟಿಗೆ ಸನ್ಮಾನ

ಅಂತರಾಷ್ಟ್ರೀಯ ಕ್ರೀಡಾಪಟು ಶುಭಂ ಮನೋಜ್ ಶೆಟ್ಟಿ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸುವ ಕಾರ್ಯಕ್ರಮ ಶಾಂತಿ ನಗರದ ಆಶಾ ನಿಲಯದಲ್ಲಿ ನಡೆಯಿತು.

ಮಾರ್ಚ್ 14ರಿಂದ 21ರ ತನಕ ನಡೆದ ಸ್ಪೆಷಲ್ ಒಲಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ನಲ್ಲಿ 177 ದೇಶಗಳು ಭಾಗವಹಿಸಿದ್ದು ಭಾರತದ ದೇಶದಿಂದ 299 ವಿಶೇಷ ಮಕ್ಕಳು ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯದಿಂದ 16 ವಿಶೇಷ ಮಕ್ಕಳು 9 ವಿವಿಧ ಸ್ಪರ್ದೆಗಳಾದ ವಾಲಿಬಾಲ್, ಫೂಟ್ ಬಾಲ್, ರೋಲರ್ ಸ್ಕೇಟಿಂಗ್, ಪವರ್ ಲಿಪ್ಟಿಂಗ್, ಹ್ಯಾಂಡ್ ಬಾಲ್, ಗೋಲ್ಫ್, ಸೈಕಿಲಿಂಗ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯಕ್ಕೆ ಒಟ್ಟು 52 ಪದಕಗಳು ಲಭಿಸಿದ್ದು ಅವುಗಳಲ್ಲಿ 16 ಚಿನ್ನ, 19 ಬೆಳ್ಳಿ ಮತ್ತು 17 ಕಂಚಿನ ಪದಕಗಳಾಗಿವೆ. ಭಾರತದ ದೇಶವು 362 ಪದಕಗಳನ್ನು ತನ್ನದಾಗಿಸಿಕೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ವರ್ಲ್ಡ್ ಸಮ್ಮರ್ ಗೇಮ್ಸ್ ನಲ್ಲಿ ಆಶಾ ನಿಲಯದ ವಿಶೇಷ ಶಿಕ್ಷಣ ಸಂಸ್ಥೆಯ ಶುಭಂ ಮನೋಜ್ ಶೆಟ್ಟಿ ಅಥ್ಲೆಟಿಕ್ ವಿಭಾಗದ ಶಾಟ್ ಪುಟ್ ನಲ್ಲಿ 4ನೇ ಸ್ಥಾನ ಹಾಗೂ 4*100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಹಿನ್ನಲೆಯಲ್ಲಿ ಬಡಗಭೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ, ಕ್ಯಾಥೊಲಿಕ್ ಸೊಸೈಟಿ, ಹಾಗೂ ವಿವಿಧ ಸಂಘ ಸಂಸ್ಥೆಯಗಳ ವತಿಯಿಂದ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಸನ್ಮಾನಿಸಲಾಯಿತು. ವಿಶೇಷ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ಬೇಕು.ಅವರಿಗೂ ಅವಕಾಶ ಸಿಕ್ಕರೆ ತಾವು ಯಾರಿಗೂ ಕಮ್ಮಿ ಇಲ್ಲ ಅಂತ ತೋರಿಸಿಕೊಡುವಷ್ಟು ಸಮರ್ಥರಾಗಿದ್ದಾರೆ. ಶುಭಂ ಶೆಟ್ಟಿ ಸಾಧನೆ ಇನ್ನಷ್ಟು ಮಾಡಲಿ ಅಂತ ಹಾರೈಸಿದರು.

ಸಮಾರಂಭದಲ್ಲಿ ಸಿಅಎಸ್.ಐ ಜುಬುಲಿ ಚರ್ಚ್ ನ ಸಭಾ ಪಾಲಕ ಸ್ಟೀವನ್ ಸರ್ವೋತ್ತಮ, ಶ್ರೇಯೋಭಿವೃದ್ದಿ ಸಮಿತಿಯ ಸಹ ಕಾರ್ಯದರ್ಶಿ ಪ್ರಭಾಕರ ಅಮ್ಮನ್ನ, ಸ್ಟೀಫನ್ ಕರ್ಕಡ, ಲೆವಿಗ್ಸನ್ ಕರ್ಕಡ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *