Header Ads
Breaking News

ಆಶೀರ್ವಾದ ಪಡೆಯಲು ಬಂದ ಮಿಥುನ್ ರೈ, ಖಾದರ್ ವಿರುದ್ಧ ಪೂಜಾರಿ ಗರಂ!: ಕಾರಣವೇನು ಗೊತ್ತೇ?

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆಯಲು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮತ್ತು ಸಚಿವ ಯು.ಟಿ. ಖಾದರ್ ಅವರ ಮೇಲೆ ಜನಾರ್ಧನ ಪೂಜಾರಿಯವರು ಗರಂ ಆದ ಘಟನೆ ಇಂದು ನಡೆದಿದೆ. ಮಿಥುನ್ ರೈ ಭೇಟಿಗೆ ಬಂದಿದ್ದ ಸಂದರ್ಭದಲ್ಲಿ ಜನಾರ್ದನ ಪೂಜಾರಿಯವರು ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು. ಈ ಸಂದರ್ಭ ಸಚಿವ ಯು,ಟಿ ಖಾದರ್ ಅವರು ಸಾಕು ಸಾಕು ಎಂದು ಅಭ್ಯರ್ಥಿ ವಿರುದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಇದು ಪೂಜಾರಿ ಅವರನ್ನು ಕೆರಳಿಸಿತು. ಖಾದರ್ ವಿರುದ್ದ ಕಿಡಿಕಾರಿದ ಪೂಜಾರಿ ಅವರು, ನೀವು ಅವಸರ ಮಾಡಿದ್ದೀರಿ, ನೀವು ಸೋಲು ಕಾಣುವಿರಿ. ಮಿಥುನ್ ರೈ ಸೋತರೆ ಯುಟಿ ಖಾದರ್ ಜಬಾಬ್ದಾರಿ. ಇದಕ್ಕೆ ಪ್ರಾಯಶ್ಚಿತ್ತವಾಗಿ ದೇವರಲ್ಲಿ ಕ್ಷಮೆಯಾಚಿಸಿ. ಮಸೀದಿ, ಚರ್ಚ್‌ಗಳಲ್ಲೂ ಪ್ರಾಯಶ್ಚಿತ್ತ ಮಾಡಬೇಕು ಎಂದು ತಾಕೀತು ಮಾಡಿದ್ರು. ಬಳಿಕ ಸಹಾನುಭೂತಿ ತೋರಿದ ಪೂಜಾರಿ ಅವರು, ಮಿಥುನ್ ರೈ, ಸಚಿವ ಖಾದರ್‌ಗೆ ಆಶೀರ್ವಾದ ನೀಡಿದರು. ನನಗೆ ಕನಸ್ಸಿನಲ್ಲಿ ದೇವರು ಬಂದು ಮಿಥುನ್ ರೈ ಗೆಲ್ಲುತ್ತಾರೆ ಅಂತ ಹೇಳಿದ್ದಾರೆ. ಹೀಗಾಗಿ ಮಿಥುನ್ ರೈ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *