Header Ads
Breaking News

ಆಶ್ರಮದ ಮಕ್ಕಳೊಂದಿಗೆ ರಾಷ್ಟ್ರೀಯ ಗ್ರಾಹಕರ ಮೇಳಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಮಂಗಳೂರಿನ ಆಶ್ರಮದ ಮಕ್ಕಳೊಂದಿಗೆ ಕರಾವಳಿ ಉತ್ಸವ ಮೈದಾನಲ್ಲಿ ನಡೆಯುವ ರಾಷ್ಟ್ರೀಯ ಗ್ರಾಹಕರ ಮೇಳಕ್ಕೆ ಆಗಮಿಸಿ ವಿನೂತನ ಮಾದರಿಯ ಅಮ್ಯೂಸ್‌ಮೆಂಟ್‌ಗಳಲ್ಲಿ ಆಟವಾಡಿ ಸವಿರುಚಿಯ ತಿಂಡಿ-ತಿನಿಸುಗಳನನು ಸವಿದು ಮಕ್ಕಳೊಂದಿಗೆ ಬೆರೆತರು. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸೆಪ್ಟಂಬರ್ ೭ರಂದು ರಾಷ್ಟ್ರೀಯ ಗ್ರಾಹಕರ ಮೇಳ ಆರಂಭಗೊಂಡಿದ್ದು, ಪ್ರತೀ ದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರದರ್ಶನ ನೀಡುತ್ತಿದೆ.

ಇನ್ನು ಕರಾವಳಿ ಉತ್ಸವ ಮೈದಾನದಲ್ಲಿರುವ ರಾಷ್ಟ್ರೀಯ ಗ್ರಾಹಕರ ಮೇಳಕ್ಕೆ ಮಂಗಳೂರು ವಿಧಾನ ಸಭಾ ಶಾಸಕರಾದ ಡಿ. ವೇದಾವ್ಯಾಸ್ ಕಾಮತ್ ಅವರು ನಗರದ ಆಶ್ರಮದ ಮಕ್ಕಳೊಂದಿಗೆ ತಿಂಡಿ ತಿನಿಸುಗಳನ್ನು ಸವಿದು ಮಕ್ಕಳಿಗೆ ಬಹುಮಾನ ನೀಡಿ ಮಕ್ಕಳೊಂದಿಗೆ ಬೆರೆತರು.ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಎನ್‌ಸಿಎಫ್ ವತಿಯಿಂದ ರಾಷ್ಟ್ರೀಯ ಗ್ರಾಹಕರ ಮೇಳವನ್ನು ಮಂಗಳೂರಿನಲ್ಲಿ ಆಯೋಜಿಸಿದ್ದಾರೆ. ಇದರಿಂದ ಮಂಗಳೂರಿನ ಜನತೆಗೆ ಉಪಯೋಗವಾಗಲಿದೆ ಎಂದು ಹೇಳಿದರು.ಇದೇ ವೇಳೆ ರಾಷ್ಟ್ರೀಯ ಗ್ರಾಹಕ ಮೇಳದ ಆಯೋಜಕರಾದ ಗೌತಮ್ ಅವರು ಮಾತನಾಡಿ ಶಾಸಕರು ಅಶ್ರಮದ ಮಕ್ಕಳೊಂದಿಗೆ ಬಂದು ಅಮ್ಯೂಸ್‌ಮೆಂಟ್‌ಗಳಲ್ಲಿ ಆಟವಾಡಿ ಮನರಂಜಿಸಿದ್ದು ವಿಶೇಷವಾಗಿತ್ತು ಎಂದರು.ರಾಷ್ಟ್ರೀಯ ಗ್ರಾಹಕರ ಮೇಳ ಒಂದು ತಿಂಗಳ ಕಾಲ ನಡೆಯಲಿದ್ದು, ಹಲವು ಮಳಿಗೆಗಳೊಂದಿಗೆ ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ.

Related posts

Leave a Reply