Header Ads
Header Ads
Breaking News

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್, ಕಿದಂಬಿ ಶ್ರೀಕಾಂತ್ ಚಾಂಪಿಯನ್

ಬಲಿಷ್ಠ ಆಟಗಾರನ ಎದುರು ಅಪೂರ್ವ ಆಟ ಆಡಿದ ಭಾರತದ ಕಿದಂಬಿ ಕಾಂತ್ ಅವರು ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ ೨೨-೨೦, ೨೧-೧೬ರ ನೇರ ಗೇಮ್ಗಳಿಂದ ಚೀನಾದ ಆಟಗಾರ ಚೆನ್ ಲಾಂಗ್ಗೆ ಆಘಾತ ನೀಡಿದ್ದಾರೆ. ಲಾಂಗ್ ಅವರು ರಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೋದ ವಾರ ಇಂಡೊನೇಷ್ಯಾ ಓಪನ್ ಸೂಪರ್ ಸರಣಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಶ್ರೀಕಾಂತ್, ಸಿಡ್ನಿ ಅಂಗಳದಲ್ಲೂ ಮೋಡಿ ಮಾಡಿದರು.
ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಎರಡು ಚಿನ್ನ ಗೆದ್ದಿರುವ ಚೀನಾದ ಚೆನ್ ಅವರ ಸಾಮರ್ಥ್ಯವನ್ನು ಚೆನ್ನಾಗಿಯೇ ಅರಿತಿದ್ದ ಭಾರತದ ಆಟಗಾರ, ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಭಿನ್ನ ರಣನೀತಿ ಹೆಣೆದು ಕಣಕ್ಕಿಳಿದಿದ್ದರು.
ಮೊದಲ ಗೇಮ್ನ ಶುರುವಿನಿಂದಲೇ ಆಕರ್ಷಕ ಸರ್ವ್ಗಳ ಮೂಲಕ ಪಾಯಿಂಟ್ಸ್ ಹೆಕ್ಕಿದ ಶ್ರೀಕಾಂತ್ ೧೦-೬ರ ಮುನ್ನಡೆ ಹೊಂದಿದ್ದರು. ಈ ಹಂತದಲ್ಲಿ ವಿಶ್ವ ಚಾಂಪಿಯನ್ ಚೆನ್ ಗುಣಮಟ್ಟದ ಆಟ ಆಡಿದರು. ಆಂಧ್ರಪ್ರದೇಶದ ಗುಂಟೂರಿನ ಪ್ರತಿಭೆ ಶ್ರೀಕಾಂತ್ ಈ ಹಂತದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಭಾರತದ ಆಟಗಾರನ ರ್ಯಾಕೆಟ್ನಿಂದ ಸಿಡಿಯುತ್ತಿದ್ದ ಬಲಿಷ್ಠ ಕ್ರಾಸ್ಕೋರ್ಟ್ ಹೊಡೆತಗಳನ್ನು ಹಿಂತಿರುಗಿಲು ಪ್ರಯಾಸಪಟ್ಟ ಚೆನ್ ಲಾಂಗ್ ಸುಲಭವಾಗಿ ಪಾಯಿಂಟ್ಸ್ ಕೈಚೆಲ್ಲಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಶ್ರೀಕಾಂತ್, ಆ ನಂತರ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಭಾರತದ ಆಟಗಾರ ಅಂತಿಮವಾಗಿ ಜಯ ತನ್ನದಾಗಿಸಿಕೊಂಡರು.

Related posts

Leave a Reply