Header Ads
Breaking News

ಆಸ್ಟ್ರೇಲಿಯಾದಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ!

ಮಂಗಳೂರು: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎನ್ನುವುದು ಹೆಚ್ಚಿನ ಯುವಜನತೆಯ ಕನಸು. ಆದರೆ ವಿವಿಧ ಕಾರಣಗಳಿಂದಾಗಿ ಅದನ್ನು ಈಡೇರಿಸಿಕೊಳ್ಳಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎಂದು ಬಯಸುವವರಿಗೆ ಉತ್ತಮ ವೇದಿಕೆ ಮಂಗಳೂರಿನಲ್ಲಿ ಸಿದ್ಧವಾಗಿದೆ. ಹೌದು, ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಐಡಿಪಿ ಸಂಸ್ಥೆಯು ಈ ಅವಕಾಶವನ್ನು ಒದಗಿಸುತ್ತಿದೆ. ಎಪ್ರಿಲ್ 25ರಂದು ಮಂಗಳೂರಿನ ನವಭಾರತ್ ಸರ್ಕಲ್ ಬಳಿ ಇರುವ ಐಡಿಪಿ ಸಂಸ್ಥೆಯ ಕಚೇರಿಯಲ್ಲಿ ಆಸ್ಟ್ರೇಲಿಯಾ ಅಡ್ಮಿಶನ್ ಡೇ ಕಾರ್ಯಕ್ರಮ ನಡೆಯಲಿದೆ.

ಎಪ್ರಿಲ್ 25 ಗುರುವಾರದಂದು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯನ್ ಶಿಕ್ಷಣ, ಶಿಕ್ಷಣ ಸಂಸ್ಥೆಗಳು ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಲವಾರು ಆಸ್ಟ್ರೇಲಿಯನ್ ಶಿಕ್ಷಣ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಡೀಕಿನ್ ಯುನಿವರ್ಸಿಟಿ, ಫ್ಲಿಂಡರ್ಸ್ ಯುನಿವರ್ಸಿಟಿ, ಜೇಮ್ಸ್ ಕುಕ್ ಯುನಿವರ್ಸಿಟಿ, ಮೊನಾಶ್ ಯುನಿರ್ಸಿಟಿ, ಆರ್‍ಎಂಐಟಿ ಯುನಿವರ್ಸಿಟಿ, ಸ್ವಿನ್‍ಬರ್ನ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ, ದಿ ಯುನಿವರ್ಸಿಟಿ ಆಫ್ ಆಡಿಲೇಡ್, ಯುನಿವರ್ಸಿಟಿ ಆಫ್ ಸೌತ್ ಆಸ್ಟ್ರೇಲಿಯಾ, ಯುನಿವರ್ಸಿಟಿ ಆಫ್ ಕ್ಯಾನ್‍ಬೆರಾ, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿ ಸೇರಿದಂತೆ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯನ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ, ಉನ್ನತ ಶಿಕ್ಷಣದ ಬಳಿಕದ ಉದ್ಯೋಗಾವಕಾಶಗಳು, ವಿವಿಧ ಕೋರ್ಸ್‍ಗಳು ಮತ್ತು ಸ್ಕಾಲರ್‍ಶಿಪ್‍ಗಳ ಮಾಹಿತಿಯ ಜೊತೆಗೆ ಅಪ್ಲಿಕೇಶನ್ ಫೀಸ್‍ನಿಂದ ವಿನಾಯಿತಿಯೂ ವಿದ್ಯಾರ್ಥಿಗಳಿಗೆ ಲಭಿಸಲಿದೆ.

ಮಂಗಳೂರಿನ ವಿದ್ಯಾರ್ಥಿಗಳ ಆಸ್ಟ್ರೇಲಿಯನ್ ಶಿಕ್ಷಣದ ಕನಸನ್ನು ನನಸಾಗಿಸಲು ಐಡಿಪಿ ಸಂಸ್ಥೆಯು ಪಣತೊಟ್ಟಿದ್ದು, ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಐಡಿಪಿ ಸಂಸ್ಥೆಯ ಕಚೇರಿ, 207, ಎರಡನೇ ಮಹಡಿ, ಇನ್‍ಲ್ಯಾಂಡ್ ಆರ್ನೇಟ್ ಬಿಲ್ಡಿಂಗ್, ಹೋಟೆಲ್ ಓಶಿಯನ್ ಪರ್ಲ್ ಎದುರು, ನವಭಾರತ್ ಸರ್ಕಲ್, ಮಂಗಳೂರು. ದೂ.ಸಂ: 0824-4411888ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ತಿಳಿಸಿದೆ.

Related posts

Leave a Reply

Your email address will not be published. Required fields are marked *