Header Ads
Header Ads
Header Ads
Breaking News

ಆಹಾರ ಗುಣಮಟ್ಟ, ಪರವಾನಗಿ ಕುರಿತು ಮಾಹಿತಿ : ಮೂಡಬಿದರೆಯಲ್ಲಿ ಸೆ.14ರಂದು ಕಾರ್ಯಕ್ರಮ

ಮೂಡುಬಿದಿರೆ: ರೋಟರಿ ಕ್ಲಬ್ ಟೆಂಪಲ್ ಟೌನ್, ಮೂಡುಬಿದಿರೆ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಸೆ. 14ರಂದು ಸಮಾಜಮಂದಿರದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯ್ದೆಯಡಿಯಲ್ಲಿ ವ್ಯಾಪರಸ್ಥರಿಗೆ ಆಹಾರ ಗುಣಮಟ್ಟ, ಸುರಕ್ಷತೆ ಮತ್ತು ಪರವಾನಗಿಯ ಕುರಿತು ಮಾಹಿತಿ ಕಾರ್ಯಕ್ರಮವು ನಡೆಯಲಿದೆ.


ಕ್ಲಬ್‌ನ ಅಧ್ಯಕ್ಷ ಬಲರಾಮ್ ಕೆ.ಎಸ್. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕ್ಯಾಂಟೀನ್, ಹೋಟೇಲ್ , ವೈನ್‌ಶಾಪ್, ರೆಸ್ಟೋರೆಂಟ್‌ಗಳು, ಬೇಕರಿಗಳು, ಹಾಲಿನ ವ್ಯಾಪಾರಿಗಳು, ಆಹಾರ ತಯಾರಕರು ಸಂಸ್ಕರಣೆ, ವಿತರಣೆ ಮಾಡುವವರು, ಕ್ಯಾಟರಿಂಗ್ ನಡೆಸುವವರು, ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು, ತಂಪುಪಾನೀಯ ತಯಾರಕರು ಮತ್ತು ಮಾರಾಟಗಾರರು, ಮೀನುಮಾಂಸ ಮಾರಾಟಗಾರರು, ಕಛೇರಿ ಕ್ಯಾಂಟೀನ್‌ಗಳು, ತರಕಾರಿ ಹಣ್ಣು ಹಂಪಲು ಮಾರಾಟಗಾರರು, ಶಾಲಾ ಕಾಲೇಜು ಕ್ಯಾಂಟೀನ್‌ಗಳು ಹಾಗೂ ಇತರ ಆಹಾರ ವಸ್ತು ಮಾರಾಟಗಾರರು ಈ ಕಾರ್‍ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಶಾಸಕ ಕೆ. ಅಭಯಚಂದ್ರ ಜೈನ್ ಕಾರ್‍ಯಕ್ರಮವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ತಾಲೂಕು ಆರೋಗ್ಯಧಿಕಾರಿ ಡಾ. ನವೀನ್ ಕುಲಾಲ್, ಮಂಗಳೂರು ಡಿಎಸ್‌ಒ ಡಾ. ರಾಜೇಶ್, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಲೆಕ್ಕ ಪರಿಶೋಧಕ ಉಮೇಶ್ ರಾವ್ ಮಿಜಾರ್ ಭಾಗವಹಿಸಲಿದ್ದಾರೆ. ಕ್ಲಬ್ ಅಧ್ಯಕ್ಷ ಬಲರಾಮ್ ಕೆ.ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾರ್‍ಯದರ್ಶಿ ಅಜಯ್ ಗ್ಲೆನ್ ಡಿಸೋಜ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಬಂಗೇರ, ಉಮೇಶ್ ರಾವ್ ಉಪಸ್ಥಿತರಿದ್ದರು.
ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply