Header Ads
Header Ads
Breaking News

ಆ.25ರಂದು ರಾಷ್ಟ್ರೀಯ ಮಟ್ಟದ ಯುವ ಸಂಗೀತ ಮಹೋತ್ಸವ

ಶ್ರಾವಣ ಸಂಗೀತ ಸಂಜೆ ಎಂಬ ರಾಷ್ಟ್ರೀಯ ಮಟ್ಟದ ಯುವ ಸಂಗೀತ ಮಹೋತ್ಸವವನ್ನು ಆಗಸ್ಟ್ 25ರಂದು ಮಂಗಳೂರಿನ ಕಾರ್‍ಸ್ಟ್ರೀಟ್‍ನ ಗೋಕರ್ಣ ಮಠದ ಶ್ರೀ ಧ್ವಾರಕಾನಾಥ್ ಸಭಾ ಗೃಹದಲ್ಲಿ ಆಗಸ್ಟ್ 26ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ನಾಯಕ್ ಅವರು ಹೇಳಿದರು.ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಗರದ ಬಲ್ಮಠದಲ್ಲಿರುವ ಕಲಾಸಾಧನಾ ಮ್ಯೂಸಿಕ್ ಸ್ಕೂಲ್ ಪ್ರಸ್ತುತಪಡಿಸುವ ಈ ರಾಷ್ಟ್ರೀಯ ಸಂಗೀತ ಮಹೋತ್ಸವದಲ್ಲಿ ಎಂಟು ಯುವ ಸಂಗೀತಗಾರರು ತಮ್ಮ ಪ್ರದರ್ಶನ ನೀಡಲಿದ್ದಾರೆ. ದೇಶದ ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹಿಂದೂಸ್ತಾನಿ ಗಾಯಕಿಯರಾದ ದೃತಿ ಚಟರ್ಜಿ, ವಿಭಾ ಎಸ್. ನಾಯಕ್ ಅವರ ಹಾಡುಗಾರಿಕೆ, ಗೋವಿಂದ್ ಬಿಲ್ಲರೆ ಅವರ ಪಕ್ವಾಝ್, ಅಕ್ಷಯ್ ಜೋಶಿ ಹಾಗೂ ರಾಜೇಶ್ ಶ್ರೀನಿವಾಸ್ ಭಾಗವತ್ ಅವರು ತಬ್ಲಾ, ದೇವೇಂದ್ರ ದೇಶಪಾಂಡೆ ಹಾಗೂ ಬಸವರಾಜ್ ಹಿರೇಮಠ್ ಅವರ ಹಾಮೋರ್ನಿಯಂ ಹೀಗೇ ದೇಶದ ನಾನಾ ಭಾಗದ ಹಾಗೂ ನಾನಾ ಕ್ಷೇತ್ರದಲ್ಲಿ ನಿಪುಣರು ಒಂದೇ ವೇದಿಕೆಯಲ್ಲಿ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು. ಇನ್ನೂ ವಿಭಾ ಎಸ್. ನಾಯಕ್ ಅವರು ಕಲಾಸಾಧಾನ ಮ್ಯೂಸಿಕ್ ಸ್ಕೂಲ್‍ನ ಬಗ್ಗೆ ವಿವರ ನೀಡಿದರು.

Related posts

Leave a Reply

Your email address will not be published. Required fields are marked *