

ಅಂತೂ ಇಂತೂ ಕೋಸ್ಟಲ್ವುಡ್ನ ಬಹು ನಿರೀಕ್ಷಿತ ಇಂಗ್ಲೀಷ್ ಎಂಕ್ಲೆಗ್ ಬರ್ಪುಜಿ ಬ್ರೋ ಸಿನಿಮಾ ವಲ್ರ್ಡ್ ವೈಡ್ ರಿಲೀಸ್ ಆಗಿದೆ. ಸಖತ್ ಕಾಮಿಡಿ ಎಂಟರ್ಟೇನ್ಮೆಂಟ್ ಸಿನಿಮಾ ನೋಡಿ ಆಡಿಯನ್ಸ್ ಫುಲ್ ಫಿದಾ ಆಗ್ಬಿಟ್ಟಿದ್ದಾರೆ. ಅಷ್ಟೇ ಅಲ್ಲ ಫಸ್ಟ್ ಶೋ ಹೌಸ್ ಫುಲ್ ಆಗಿದ್ದು, ಸಿನಿಮಾ ನೋಡಿದ ಸಿನಿ ಪ್ರಿಯರು ಸಿನಿಮಾದ ಬಗ್ಗೆ ರಿವೀವ್ಸ್ ಏನ್ ನೀಡಿದ್ರು ಗೊತ್ತಾ..?
ವಾವ್ ಸೂಪರ್ ಕಾಮಿಡಿ, ಸಿನಿಮಾ ಸಖತ್ ಆಗಿತ್ತು..ಸಿನಿಮಾ ಆರಂಭದಿಂದ ಹಿಡಿದು ಎಂಡ್ ವರೆಗೂ ತುಂಬಾನೇ ಎಂಜಾಯ್ ಮಾಡಿದ್ವಿ… ಇದು ಇಂಗ್ಲೀಷ್ ಸಿನಿಮಾ ನೋಡಿದ ಪ್ರತಿಯೊಬ್ರ ಮಾತು… ಇಂಗ್ಲೀಷ್ ಮೂವಿ ನೋಡಿದ ಪ್ರತಿಯೊಬ್ಬರೂ ಕೂಡಾ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಲೆ ಕಲ್ಯಾಣ ಅನ್ನೋ ಟ್ಯಾಗ್ ಲೈನ್ ಇರೋ ಇಂಗ್ಲೀಷ್ ಎಂಕ್ಲೆಗ್ ಬರ್ಪುಜಿ ಬ್ರೋ ಸಿನಿಮಾದ ಪ್ರತಿಯೊಂದು ಸೀನ್ನಲ್ಲೂ ಪಂಚಿಂಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತಂ, ಸುಂದರ ತಾಣಗಳ ದೃಶ್ಯ ಒಂದಕ್ಕಿಂತ್ ಒಂದು ಅದ್ಭುತವಾಗಿತ್ತು. ಹೌದು.. ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ನಿರ್ಮಾಣದ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಕರಾವಳಿಯಲ್ಲಿ ಹೆಚ್ಚಿನ ಭಾಗದಲ್ಲಿ ಆಚರಣೆಯಲ್ಲಿರುವ ಪ್ರೇತಗಳ ಮದುವೆಯನ್ನೇ ಮುಖ್ಯ ಕಥೆಯನ್ನಾಗಿ ಬಳಸಿಕೊಂಡು ಈ ಚಿತ್ರ ನಿರ್ಮಿಸಲಾಗಿದ್ದು, ಇಂದು ಸಿನಿಮಾ ವಲ್ರ್ಡ್ ವೈಡ್ ರಿಲೀಸ್ ಆಗಿದೆ.
ಮಂಗಳೂರಿನ ಬಿಜೈಯಲ್ಲಿರುವ ಭಾರತ್ ಮಾಲ್ನ ಬಿಗ್ ಸಿನಿಮಾದಲ್ಲಿ ಶುಕ್ರವಾರ ಬೆಳಿಗ್ಗೆ “ಇಂಗ್ಲೀಷ್”–ಎಂಕ್ಲೆಗ್ ಬರ್ಪುಜಿ ಬ್ರೋ’ ಚಿತ್ರಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಮೂಲಕ ತುಳು ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಏಕಕಾಲದಲ್ಲಿ 26 ಚಿತ್ರಮಂದಿರಗಳಲ್ಲಿ ಇಂಗ್ಲೀಷ್ ಚಿತ್ರ ಬಿಡುಗಡೆಗೊಂಡಿತು.
ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು.
ಬಳಿಕ ಮಾತನಾಡಿದ ನಿರ್ಮಾಪಕರಾದ ಹರೀಶ್ ಶೇರಿಗಾರ್ ಚಿತ್ರವನ್ನು ಪ್ರತಿಯೊಬ್ಬರು ಪ್ರೊತ್ಸಾಹಿಸ ಬೇಕು, ಎಲ್ಲರ ಬೆಂಬಲ, ಸಹಕಾರದಿಂದ ಚಿತ್ರ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರೆ ಮತ್ತಷ್ಟು ತುಳು ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರೂ ಚಿತ್ರಕ್ಕೆ ವ್ಯಾಪಕ ಪ್ರೊ ತ್ಸಾಹ ನೀಡುವ ಮೂಲಕ ಚಿತ್ರದ ಯಶಸ್ಸಿಗೆ ಸಹಕರಿಸಬೇಕು ಎಂದ್ರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಎಸಿಪಿ ಜಗದೀಶ್ ಭಾಗವಹಿಸಿ ಸಿನಿಮಾಕ್ಕೆ ಶುಭಹಾರೈಸಿದ್ರು.
ಇನ್ನು ಅತಿಥಿಗಲಾಗಿ ಭಾಗವಹಿಸಿದ್ದ ಧರ್ಮಪಾಲ್ ದೇವಾಡಿಗ, ಡಾ. ದೇವರಾಜ್, ಭೋಜರಾಜ್ ವಾಮಂಜೂರು, ಸಿನಿಮಾ ನಟ ಪೃಥ್ವಿ ಅಂಬರ್, ವಿಸ್ಮಯ್ ವಿನಾಯಕ್, ನವ್ಯ ಪೂಜಾರಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ವಿ4 ನ್ಯೂಸ್ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಪ್ರಕಾಶ್ ಪಾಂಡೇಶ್ವರ್, ಶ್ರೀನಿವಾಸ್ ಶೇರಿಗಾರ್ ಮುಂತಾದವರು ಮಾತನಾಡಿ ಚಿತ್ರ ಯಶಸ್ಸು ಕಾಣಲಿ ಎಂದು ಶುಭಕೋರಿ, ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇದೇ ವೇಳೆ ವಾಮನ್ ಮರೋಳಿ, ವೇಣಿ ಮರೋಳಿ, ಪ್ರಕಾಶ್ ಶೇರಿಗಾರ್, ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ, ಪತ್ರಕರ್ತ ಬಾಳಾ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ವಿಸ್ಮಯ್ ವಿನಾಯಕ್, ದೀಪಕ್ ರೈ ಪಾಣಾಜೆ, ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಖ್ಯಾತಿಯ ಪಿಂಕಿರಾಣಿ ಅಶ್ವಥ್ ಶೆಟ್ಟಿ, ನಾಯಕ ನಟನಾಗಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್, ನಾಯಕ ನಟಿಯಾಗಿ ನವ್ಯ ಪೂಜಾರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಮ್ಯೂಸಿಕ್ನಲ್ಲಿ ಸಹಕರಿಸಿದ್ದಾರೆ. ಇನ್ನು ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೊದಲ ದಿನವೇ ಆಡಿಯನ್ಸ್ ಕ್ರೌಡ್ ನೋಡಿದ ಇಂಗ್ಲೀಷ್ ಸಿನಿಮಾ ತಂಡ ಸಖತ್ ಖುಷಿಯಲ್ಲಿದ್ದಾರೆ.