Breaking News

ಇಂಡಿಯನ್ ಓಪನ್ ಸರ್ಫಿಂಗ್‌ಗೆ ಅದ್ದೂರಿ ತೆರೆ, ಸಮಾರೋಪದಲ್ಲಿ ಜಾಂಟಿ ರೋಡ್ಸ್, ನಟ ಸುನಿಲ್ ಶೆಟ್ಟಿ


ಮಂಗಳೂರಿನ ಸಸಿಹಿತ್ಲು ಸಮುದ್ರ ತೀರದಲ್ಲಿ ನಡೆದ ಮೂರು ದಿನಗಳ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪ್ಯನ್‌ಶಿಪ್ ಅದ್ಧೂರಿ ತೆರೆಕಂಡಿದೆ.
ಸಮಾರೋಪದಲ್ಲಿ ಸೆಲೆಬ್ರಿಟಿಗಳಾಗಿ ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಮತ್ತು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡು ಜನಮನ ಸೆಳೆದರು. ಮೂರು ದಿನಗಳ ಪರ್ಯಂತ ನಡೆದ ಸರ್ಫಿಂಗ್ ಉತ್ಸವದಲ್ಲಿ ದೇಶ ವಿದೇಶದಿಂದ ೧೨೫ಕ್ಕೂ ಹೆಚ್ಚು ಮಂದಿ ಆಟಗಾರರು ಪಾಲ್ಗೊಂಡಿದ್ದರು. ಕೊನೆಯ ದಿನ ಮುಕ್ತ ವಿಭಾಗದಲ್ಲಿ ಮಾಲ್ದೀವ್ಸ್ ಮೂಲದ ಅಮ್ಮಾ ಡೇ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದರು. ಇನ್ನು ಮಹಿಳಾ ವಿಭಾಗದಲ್ಲಿ ಪಾಂಡಿಚೇರಿಯ ಸುಹಾಸಿನಿ ಡಾಮಿಯನ್ ಚಾಂಪ್ಯನ್ ಆದರೆ, ಚೆನ್ನೈ ಮೂಲದ ವೆಂಕಟ್ ಮತ್ತು ಸೇಕರ್ ಪಿಚೈ ಮಾಸ್ಟರ್ ವಿಭಾಗದಲ್ಲಿ ಪ್ರಥಮ ಸ್ಥಾನಿಗಳಾಗಿ ಬಹುಮಾನ ಪಡೆದರು. ಇದೇ ವೇಳೆ ಕನ್ನಡ ಚಿತ್ರನಟ ಹುಚ್ಚ ವೆಂಕಟ್ ಕೂಡ ಆಗಮಿಸಿ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸು ಕೊಟ್ಟಿದ್ದು ವಿಶೇಷವಾಗಿತ್ತು. ಅಂದಹಾಗೆ, ಟೂರಿಸಂ ಅಭಿವೃದ್ಧಿಗಾಗಿ ಕರ್ನಾಟಕ ಬೀಚ್ ಫೆಸ್ಟಿವಲ್ ಹೆಸರಲ್ಲಿ ರಾಷ್ಟ್ರ ಮಟ್ಟದ ಸರ್ಫಿಂಗ್ ಉತ್ಸವ ನಡೆದಿದ್ದು ಪ್ರವಾಸೋದ್ಯಮ ಆಕರ್ಷಣೆ ನಿಟ್ಟಿನಲ್ಲಿ ಸಾವಿರಾರು ಮಂದಿಯನ್ನು ಸುಂದರ ಸಮುದ್ರ ತೀರಕ್ಕೆ ಆಕರ್ಷಿಸಲು ಯಶಸ್ವಿಯಾಯಿತು. ಕ್ರಿಕೆಟಿಗ ಜಾಂಟಿ ರೋಡ್ಸ್ ಸ್ವತಃ ಸರ್ಫರ್ ಆಗಿದ್ದು ಇಂಡಿಯನ್ ಸರ್ಫಿಂಗ್ ಫೆಡರೇಶನ್ ಅಂಬಾಸಿಡರ್ ಆಗಿದ್ದಾರೆ.

Related posts

Leave a Reply