Header Ads
Breaking News

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯಿಂದ ಮಂದಾರದ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳ ವಿತರಣೆ

ಮಂದಾರದ ತ್ಯಾಜ್ಯರಾಶಿಯಿಂದ ನಿರ್ವಸಿತರಾದ ನಿವಾಸಿಗಳು ಸದ್ಯ ಕುಲಶೇಖರದ ಬೈತುರ್ಲಿಯಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ವತಿಯಿಂದ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

27 ಕುಟುಂಬಗಳಿಗೆ ಪ್ರತ್ಯೇಕವಾಗಿ ಕುಕ್ಕರ್, ಬಟ್ಟಲು ಸೇರಿದಂತೆ ಅಡುಗೆ ಕಿಟ್ ಹಾಗೂ ಅಕ್ಕಿ, ಬೇಳೆ, ಟೀ ಪೌಡರ್ ಸೇರಿದಂತೆ ದಿನಬಳಕೆ ವಸ್ತುಗಳನ್ನು ನೀಡಲಾಯಿತು. ರೆಡ್‍ಕ್ರಾಸ್ ಪ್ರಮುಖರಾದ ಪ್ರಭಾಕರ ಶರ್ಮ, ಸಿಎ ಶಾಂತಾರಾಮ ಶೆಟ್ಟಿ, ರವೀಂದ್ರನಾಥ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಮಂಗಳೂರು ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಜತೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *