Header Ads
Header Ads
Header Ads
Breaking News

ಇಂಡಿಯಾನ್ ಕರಾಟೆ ಚಾಂಪಿಯನ್‌ಶಿಪ್ 2017 ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ನ.4 ಮತ್ತು 5 ರಂದು ನೆಹರೂ ಮೈದಾನದಲ್ಲಿ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್ ನಗರದ ನೆಹರೂ ಮೈದಾನದಲ್ಲಿ ನಡೆಯಲಿದ್ದು ಐತಿಹಾಸಿಕ ಟೂರ್ನಿಗೆ ಸಕಲ ಸಿದ್ಧತೆಗಳು ನಡೆದಿದೆ.

ಈ ಬಗ್ಗೆ ನೆಹರೂ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ. ಸದಾನಂದ ಶೆಟ್ಟಿ ಮಾತನಾಡಿ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಅನಂತರ ಮನಪಾ ಮೇಯರ್ ಕವಿತಾ ಸನಿಲ್ ಮಾತನಾಡಿ, ಕರಾಟೆ ಚಾಂಪಿಯನ್‌ಶಿಪ್‌ಗೆ ದೇಶದ ಹಲವು ಮಂದಿ ಅತ್ಯುನ್ನತ ಕರಾಟೆ ಪಟುಗಳು ಭಾಗವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಎಂಟು ವರ್ಷಕ್ಕಿಂತ ಕೆಳಗಿನ ಪುಟಾಣಿಗಳು, 10 ರ ವಯೋಮಿತಿಯ ಪುಟಾಣಿಗಳು ಕೂಡಾ ತಮ್ಮ ಕೌಶಲವನ್ನು ಒರೆಗೆ ಹಚ್ಚಲು ಈ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುರೇಂದ್ರ, ಮಹೇಶ್ ಆಚಾರ್ಯ, ಸುರೇಶ್, ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply