Header Ads
Header Ads
Breaking News

ಇಂಡೋನೇಶಿಯಾ ಸೂಪರ್ ಸರಣಿ ಬ್ಯಾಡ್ಮಿಂಟನ್, ಎರಡನೇ ಸುತ್ತಿಗೆ ಪ್ರಣಯ್, ಸಿಂಧು, ಸೈನಾ

ದಿಟ್ಟ ಆಟ ಆಡಿದ ಭಾರತದ ಎಚ್. ಎಸ್. ಪ್ರಣಯ್ ಅವರು ಇಂಡೊನೇಷ್ಯಾ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ?ಹಣಾಹಣಿಯಲ್ಲಿ ಪ್ರಣಯ್ ೨೧-೧೩, ೨೧-೧೮ರ ನೇರ ಗೇಮ್ಗಳಿಂದ ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಅವರನ್ನು ಪರಾಭವ ಗೊಳಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ೨೯ನೇ ಸ್ಥಾನ ಹೊಂದಿರುವ ಪ್ರಣಯ್ ಶುರು ವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಆಕರ್ಷಕ ಸರ್ವ್ಗಳನ್ನು ಮಾಡಿದ ಅವರು ನೆಟ್ನ ಸಮೀಪದಲ್ಲಿ ಷಟಲ್ ಡ್ರಾಪ್ ಮಾಡುವ ತಂತ್ರ ಅನುಸರಿಸಿದರು. ಈ ಮೂಲಕ ಲೀಲಾಜಾಲವಾಗಿ ಪಾಯಿಂಟ್ಸ್ ಹೆಕ್ಕಿ ಮುನ್ನಡೆ ಕಂಡು ಕೊಂಡರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ೨೦ನೇ ಸ್ಥಾನ ಹೊಂದಿರುವ ಅಂಥೋಣಿ ಇದರಿಂದ ವಿಚಲಿತರಾ ದಂತೆ ಕಂಡರು. ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿ ಪಾಯಿಂಟ್ಸ್ ಕೈಚೆಲ್ಲಿದರು.
ಇದಕ್ಕೆ ಮೊದಲು ಮಹಿಳಾ ವಿಭಾಗದಲ್ಲಿ ಸೈನಾ ಮತ್ತು ಸಿಂಧು ಎರಡನೇ ಸುತ್ತಿಗೆ ಸುಲಭವಾಗಿ ಗೆದ್ದು ನಡೆದಿದ್ದಾರೆ.

Related posts

Leave a Reply