Header Ads
Header Ads
Breaking News

ಕಡಲ ತೀರದ ಗಡಿ ಉಲ್ಲಂಘಿಸಿದ ಆರೋಪ : ಕಳೆದ ಐದು ತಿಂಗಳಿಂದ ಬಂಧಿಯಾಗಿರುವ ನೌಕರರು

ಮಂಜೇಶ್ವರ : ಕಡಲ ತೀರದ ಗಡಿಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಉಪ್ಪಳ, ಕುಂಬಳೆ, ಕಾಸರಗೋಡು ನಿವಾಸಿಗಳ ಸಹಿತ 23 ಭಾರತೀಯರನ್ನೊಳಗೊಂಡ ಹಡಗೊಂದನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದು ಅದರಲ್ಲಿದ್ದ ನೌಕರರನ್ನು ಬಂಧಿಸಿದ್ದಾರೆ. ಇಂದು, ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ನೌಕರರು ಇದೀಗ ಕಳೆದ ಐದೂವರೆ ತಿಂಗಳಿನಿಂದ ಬಂಧಿಯಾಗಿರುವ ಭಾರತೀಯರ ದುರಂತ ಕತೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಫೆಬ್ರವರಿ ೮ರಂದು ಸಿಂಗಾಪುರ ಸಮೀಪದಲ್ಲಿ ಇಂಡೋನೇಷ್ಯಾ ನೌಕಾ ಸೇನೆ ಹಡಗನ್ನು ವಶಕ್ಕೆ ತೆಗೆದುಕೊಂಡಿದೆ. ಎರಡು ವರ್ಷಕ್ಕೊಮ್ಮೆ ನಡೆಸುವ ಹಡಗಿನ ದುರಸ್ಥಿ ಕಾರ್ಯ ಮುಗಿದ ಬಳಿಕ ಸಿಂಗಾಪುರ ಬಂದರಿನಲ್ಲಿ ಸರಕುಗಳನ್ನು ಹೇರುತ್ತಿರುವ ಮಧ್ಯೆ ಭಾರತೀಯರಿರುವ ಎಂಟಿಎಸ್‌ಜಿ ವೇಗಸ್ ಆಂಗ್ಲೊ ಈಸ್ಟನ್ ಶಿಪ್ಪಿಂಗ್ ಕಂಪನಿಯ ಹಡಗನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದಿರುವುದಾಗಿ ಹೇಳಲಾಗಿದೆ.ಉಪ್ಪಳ ನಯಾಬಜಾರ್ ಪಾರಕಟ್ಟ ನಿವಾಸಿ ಮೂಸ ಕುಂಞಿ, ಮೊಗ್ರಾಲ್ ಕೊಪ್ಪಳದ ಕಲಂದರ್, ಕಾಸರಗೋಡು ನಿವಾಸಿ ಅನೂಪ್, ಪಾಲಕ್ಕಾಡ್ ಜಿಲ್ಲೆಯ ಪೆರಿಂಜುರ ನಿವಾಸಿ ವಿಪಿನ್ ರಾಜ್ ಸೇರಿದಂತೆ ಗೋವಾ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ ರಾಜ್ಯಗಳಲ್ಲಿರುವ ನಿವಾಸಿಗಳಾಗಿದ್ದಾರೆ ಇದೀಗ ಬಂಧಿಯಾಗಿ ಸಂಕಷ್ಟವನ್ನು ಅನುಭವಿಸುತಿದ್ದಾರೆ.
ಯಾವುದಾದರೂ ರೀತಿಯ ಪ್ರತಿಫಲದ ನಿರೀಕ್ಷೆಯನ್ನಿಟ್ಟುಕೊಂಡು ಇಂಡೋನೇಷ್ಯಾ ನೌಕಾ ಸೇನಾ ಅಧಿಕಾರಿಗಳು ನಮ್ಮನ್ನು ಬಿಡುಗಡೆಗೊಳಿಸಲು ವಿಳಂಭ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ನೌಕರರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಭಾರತ ಸರಕಾರ ಹಾಗೂ ಕೇರಳ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬಂಧಿಯಾಗಿರುವ ನಮ್ಮನ್ನು ಬಿಡುಗೊಳಿಸಬೇಕೆಂಬುದಾಗಿ ಭಾರತೀಯ ನೌಕರರು ವಿನಂತಿಸಿಕೊಂಡಿದ್ದಾರೆ.

 

Related posts

Leave a Reply

Your email address will not be published. Required fields are marked *