Breaking News

ಇಂದಿನಿಂದ ಕರಾವಳಿಯಲ್ಲಿ ಮೀನುಗಾರಿಕೆ ಬಂದ್, ಮಲ್ಪೆ, ಮಂಗಳೂರುಗಳಲ್ಲಿ ಕರೆಯೇರಿದ ಯಾಂತ್ರಿಕ ಬೋಟುಗಳು


ಪ್ರತೀ ದಿನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಉಡುಪಿ ಮಲ್ಪೆಯ ಸರ್ವ ಖುತು ಮೀನುಗಾರಿಕಾ ಬಂದರು ಸ್ಥಭ್ದಗೊಂಡಿದೆ. ಜೂನ್ ೧ರಿಂದ ಜುಲೈ ೩೧ರವರೆಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದನ್ನು ಸರಕಾರ ನಿಷೇಧಿಸಿದ್ದು ಈ ಹಿನ್ನಲೆಯಲ್ಲಿ ಮಲ್ಪೆಯಲ್ಲಿರುವ ೮೦೦ಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಮಂಗಳೂರು ಇದಕ್ಕೆ ಹೊರತಲ್ಲ.
ಪ್ರತೀ ವರ್ಷ ಜೂನ್ ೧ರಿಂದ ಆಗಷ್ಟ್ ೧೦ರವರೆಗೆ ಆಳ ಸಮುದ್ರದ ಮೀನುಗಾರಿಕೆಗೆ ನಿಷೇಧ. ಆದರೆ ಎರಡುಗಳ ವರ್ಷಗಳ ಹಿಂದೆ ಕೇಂದ್ರ ಸರಕಾರ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಮೀನುಗಾರಿಕಾ ನಿಷೇಧವನ್ನು ಜಾರಿಗೆ ತಂದಿದ್ದು ಇದರಿಂದ ಜೂ.೧ರಿಂದ ಜುಲೈ೩೧ರವರೆಗೆ ಮೀನುಗಾರಿಕೆ ನಡೆಸಲು ನಿಷೇಧವಿದೆ. ಈಗಾಗಲೇ ಮಲ್ಪೆಯಲ್ಲಿ, ಮಂಗಳೂರಿನಲ್ಲಿ ಆಳ ಸಮುದ್ರದ ಬೋಟುಗಳು ದಡ ಸೇರಿವೆ. ಸದಾ ಚಟುವಟಿಕೆಯಿಂದ ಕೂಡಿರುವ ಮೀನುಗಾರಿಕಾ ಬಂದರು ಸ್ಥಬ್ದಗೊಂಡಿದೆ. ಕಾರಣ ಆಳ ಸಮುದ್ರದ ಮೀನುಗಾರಿಕೆ ನಿಷೇಧ ಇರುವ ಹಿನ್ನಲೆಯಲ್ಲಿ ಈಗಾಗಲೇ ನೂರಾರು ಬೋಟುಗಳು ದಡ ಸೇರಿವೆ. ಜೂನ್ ತಿಂಗಳಿನಿಂದ ಮೀನುಗಳು ಸಂತಾನೋತ್ಪತ್ತಿ ನಡೆಸುತ್ತದೆ ಎಂಬ ಕಾರಣಕ್ಕಾಗಿ ಆಳ ಸಮುದ್ರದ ಮೀನುಗಾರಿಕೆಗೆ ಸರಕಾರ ನಿಷೇಧ ಹೇರಿತ್ತು. ಕೇಂದ್ರದ ಕೃಷಿ ಸಂಗೋಪನೆ ಮತ್ತು ಮೀನುಗಾರಿಕಾ ಸಚಿವಾಲಯದ ಆದೇಶದ ಅನ್ವಯ ಕರ್ನಾಟಕ ಸೇರಿದಂತೆ ಎಲ್ಲಾ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳ ವಿಶೇಷ ಆರ್ಥಿಕ ವಲಯದ ೧೨ರಿಂದ ೨೦೦ ನಾಟಿಕಲ್ ಮೈಲು ದೂರದ ಪ್ರದೇಶದತನಕ ಮೀನುಗಾರಿಕೆ ನಡೆಸುವ ಎಲ್ಲಾ ವಿಧದ ಮೀನುಗಾರಿಕೆಗೆ ೬೧ದಿನಗಳ ನಿಷೇಧವನ್ನು ಹೇರಿ ಏಕರೂಪದ ಕಾನೂನನ್ನ ಜಾರಿಗೆ ತಂದಿದೆ. ಮಲ್ಪೆ ಬಂದರಿನಲ್ಲಿರುವ ಸುಮಾರು ೮೦೦ಕ್ಕೂ ಅಧಿಕ ಬೋಟುಗಳು, ಮಂಗಳೂರಿನಲ್ಲಿ ೫೦೦ ಬೋಟುಗಳಿ ಬಂದರಿನ ಸ್ವಸ್ಥಾನಕ್ಕೆ ಮರಳಿದೆ. ಕೆಲವೊಂದು ಬೋಟುಗಳು ಸ್ಥಳಾವಕಾಶದ ಕೊರತೆಯಿಂದ ವಾರದ ಮೊದಲೇ ಬಂದರಿಗೆ ಬಂದು ಸೇರಿವೆ.
ಈಗಾಗಲೇ ೯೫ ಶೇಕಡಾದಷ್ಟು ಬೋಟುಗಳು ದಡ ಸೇರಿದ್ದು ಬಂದರು ಭರ್ತಿಗೊಂಡಿದೆ. ಮೀನುಗಾರರು ದೋಣಿಗಳನ್ನು ರಿಪೇರಿ ಮಾಡುವ, ಮೀನಿನ ಬಾಕ್ಸ್‌ಗಳನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀನಿನ ಧಾರಣೆ ಹೆಚ್ಚಾಗಿದೆ. ಆದರೆ ಮೀನು ಹೆಚ್ಚು ವಿದೇಶಕ್ಕೆ ರಪ್ತಾಗುತ್ತಿದ್ದು ಇಲ್ಲಿ ಮೀನಿನ ದರ ದುಬಾರಿಯಾಗಿದೆ. ಸಾಮಾನ್ಯವಾಗಿ ಹಾಗೂ ಕಡಿಮೆ ದರದಲ್ಲಿ ಸುಗುತ್ತಿದ್ದ ಭೂತಾಯಿ ಮೀನು ಈ ಬಾರಿ ಮಾಯವಾಗಿದ್ದು ಅದರ ಬದಲು ರಾಣಿ ಮೀನು ಹೆಚ್ಚಾಗಿ ಸಿಕ್ಕಿದೆ.
ಇನ್ನೇನಿದ್ದರೂ ನಾಡ ದೋಣಿ ಮೀನುಗಾರಿಕೆ ಆರಂಭವಾಗಲಿದೆ. ಇಷ್ಟು ದಿನ ದುಬಾರಿಯಾದ ಮೀನು ಇನ್ನು ೨ ತಿಂಗಳು ಸಿಗುವುದೇ ಕಷ್ಟ. ಮೀನು ಪ್ರೀಯರಿಕೆ ಮೀನು ಮರೀಚಿಕೆಯಾಗಲಿದ್ದು ಒಟ್ಟಾರೆಯಾಗಿ ವಿದೇಶಕ್ಕೆ ಮೀನಿನ ರಪ್ತು, ಮೀನಿನ ದರ ದುಬಾರಿ, ಹೆಚ್ಚಿನ ಬೇಡಿಕೆಯಿಂದ ಮೀನು ಪ್ರಿಯರು ಮಾತ್ರ ತಲೆಕೆಡಿಸಿಕೊಂಡಿದ್ದಾರೆ.

Related posts

Leave a Reply