

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಮಾಲಕರು ಟೋಲ್ಪ್ಲಾಝಾಗಳಲ್ಲಿ ಶುಲ್ಕ ಪಾವತಿಸಲು ಫಾಸ್ಟ್ಯಾಗ್ ಬಳಸುವುದು ಇಂದು ಮಧ್ಯರಾತ್ರಿಯಿಂದ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ತಮ್ಮ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸದೇ ಇರುವವರು ಅಥವಾ ಕಾರ್ಯ ನಿರ್ವಹಿಸದ ಫಾಸ್ಟ್ಯಾಗ್ ಹೊಂದಿರುವವರು ದೇಶಾದ್ಯಂತದ ಇಲೆಕ್ಟ್ರಾನಿಕ್ಸ್ ಟೋಲ್ ಪ್ಲಾಝಾದಲ್ಲಿ ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ರಸ್ತೆ ಹಾಗೂ ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಶುಲ್ಕ ಪಾವತಿ ಫ್ಲಾಝಾಗಳಲ್ಲಿರುವ ಎಲ್ಲ ಪಥಗಳನ್ನು 2021 ಫೆಬ್ರವರಿ 15 ಹಾಗೂ 16ರ ಮಧ್ಯರಾತ್ರಿಯಿಂದ `ಶುಲ್ಕ ಪ್ಲಾಝಾದ ಫಾಸ್ಟ್ಯಾಗ್ ಪಥ’ ಎಂದು ಘೋಷಿಸಲು ನಿರ್ಧರಿಸಲಾಗಿದೆ
ಡಿಜಿಟಲ್ ವಿಧಾನದ ಮೂಲಕ ಶುಲ್ಕ ಪಾವತಿಯನ್ನು ಇನ್ನಷ್ಟು ಉತ್ತೇಜಿಸಲು, ಕಾಯು ಸಮಯ, ತೈಲ ಬಳಕೆ ಇಳಿಸಲು ಹಾಗೂ ಶುಲ್ಕ ಪ್ಲಾಝಾದ ಮೂಲಕ ತಡೆ ರಹಿತ ಸಂಚಾರವನ್ನು ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.ಸದ್ಯ ಫಾಸ್ಟ್ಯಾಗ್ ಬಳಕೆದಾರರ ಸಂಖ್ಯೆ 2.54 ಕೋಟಿ ಇದೆ. ಎನ್ಎಚ್ಎಐ ಮೂಲಗಳ ಪ್ರಕಾರ ಇನ್ನೂ ಎರಡು ಕೋಟಿಯಷ್ಟು ನಾಲ್ಕು ಚಕ್ರ ಹಾಗೂ ಭಾರೀ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ.