Header Ads
Header Ads
Breaking News

ಇಂದಿನಿಂದ ಪುತ್ತೂರಿನಲ್ಲಿ ‘ದಸರಾ ನಾಡಹಬ್ಬ’: ‘ಅರಿವಿನದಿಬ್ಬ ಪುತ್ತೂರು ದಸರಾ ನಾಡಹಬ್ಬ’ ಕೃತಿ ಅನಾವರಣ

ಪುತ್ತೂರು : ಪುತ್ತೂರಿನ ಮಹಾಲಿಂಗೇಶ್ವರ ದೇವಳ ಹಾಗೂ ಪುತ್ತೂರು ದಸರಾ ನಾಡಹಬ್ಬ ಸಮಿತಿಯ ವತಿಯಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ66ನೇ ‘ದಸರಾ ನಾಡಹಬ್ಬ’ ಕಾರ್ಯಕ್ರಮ ಅ,9ರಿಂದ 17ರ ತನಕ ವಿವಿಧ ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವುದು ಎಂದು ದಸರಾ ನಾಡಹಬ್ಬ ಸಮಿತಿಯ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್ ಅವರು ತಿಳಿಸಿದರು. ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅ.9ರಂದು ಸಂಜೆ 6ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುವುದು. ಸಮಾರಂಭದಲ್ಲಿ ಪುತ್ತೂರಿನಲ್ಲಿ ದಸರಾ ನಾಡಹಬ್ಬ ನಡೆದು ಬಂದ ಕುರಿತಾದ ‘ಅರಿವಿನದಿಬ್ಬ ಪುತ್ತೂರು ದಸರಾ ನಾಡಹಬ್ಬ’ ಕೃತಿ ಅನಾವರಣಗೊಳ್ಳುವುದು. ಬಳಿಕ ಭರತನಾಟ್ಯ‘ನೃತ್ಯ ಸಂಜೆ’ ಪ್ರದರ್ಶನ. ಅ.10 ರಿಂದ 17ರ ತನಕ ಪ್ರತೀ ದಿನ ಸಂಜೆ 6 ಗಂಟೆಗೆ ಉಪನ್ಯಾಸ, 7ಗಂಟೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದರು. ದಸರಾ ನಾಡಹಬ್ಬ ಸಮಿತಿಯ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್,ಕಾರ್ಯದರ್ಶಿ ಎಂ.ಟಿ.ಜಯರಾಮ್ ಭಟ್ ಮತ್ತು ಕೋಶಾಧಿಕಾರಿ ರಮೇಶ್ ಬಾಬು ಪಿ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply