Header Ads
Header Ads
Header Ads
Breaking News

ಇಂದಿರಾಗಾಂಧಿಯವರ ಕಾರ್ಯಚಟುವಟಿಕೆ ದೇಶಕ್ಕೆ ಮಾದರಿ ಉಳ್ಳಾಲದಲ್ಲಿ ಸಚಿವ ಯು.ಟಿ. ಖಾದರ್ ಹೇಳಿಕೆ

ಉಳ್ಳಾಲ: ಹಿಂದೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭ ಧರ್ಮಸ್ಥಳ ಭೇಟಿ ನೀಡಿದ್ದಾಗ, ವಿಶೇಷ ವಿಮಾನದ ಮೂಲಕ ಕಾರಾಗಲಿ, ಹೆಚ್ಚುವರಿ ಹೆಲಿಕಾಪ್ಟರ್‌ಗಳಾಗಲಿ ಬಂದಿರಲಿಲ್ಲ, ಸರಳ ಜೀವನದ ಜತೆಗೆ ಬಡಜನರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸಿದಂತಹ ಇಂದಿರಾಗಾಂಧಿ ಅವರ ಕಾರ್‍ಯಚಟುವಟಿಕೆಗಳು ದೇಶಕ್ಕೆ ಮಾದರಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಪುಣ್ಯತಿಥಿಯ ಅಂಗವಾಗಿ ಶಾಂತಿ ಸಹೋದರತೆ ಹಾಗೂ ಸಹಿಷ್ಣುತೆಗಾಗಿ ಮಂಗಳವಾರ ಹಮ್ಮಿಕೊಳ್ಳಲಾದ ಜನಜಾಗೃತಿ ಹಾಗೂ ನಾಡಿನ ಮತೀಯ ಸಾಮರಸ್ಯಕ್ಕಾಗಿ ‘ ಸದ್ಭಾವನಾ ಉಪವಾಸ ಸತ್ಯಾಗ್ರಹ ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಾಭಿಮಾನದ ಬದುಕು ರೂಪಿಸಿದವರು. ತೊಕ್ಕೊಟ್ಟುವಿನಲ್ಲಿ ಅವರ ಪುಣ್ಯತಿಥಿಯ ಅಂಗವಾಗಿ ಆರಂಭಗೊಂಡ ಉಪವಾಸ ಕಾರ್ಯಕ್ರಮ ಪ್ರಪಂಚದಾದ್ಯಂತ ನಡೆಯಲಿ, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದರು.
ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಯು.ಕಣಚೂರು ಮೋನು, ಎಂ.ಎ.ಗಫೂರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಎನ್.ಎಸ್.ಕರೀಂ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply