Header Ads
Breaking News

ಇಂದು ಎಲ್ಲೆಡೆ ವಿಜಯ ದಶಮಿ ಸಂಭ್ರಮ : ಉಡುಪಿಯಲ್ಲಿ ಆರ್.ಎಸ್.ಎಸ್ ನಿಂದ ಪಥ ಸಂಚಲನ

ಇಂದು ಎಲ್ಲೆಡೆ ವಿಜಯ ದಶಮಿಯ ಸಂಭ್ರಮ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್.ಎಸ್.ಎಸ್.) ಕೂಡಾ ಇಂದು ಉಡುಪಿಯಲ್ಲಿ ವಿಜಯ ದಶಮಿಯನ್ನು ಆಚರಿಸಿಕೊಂಡಿತು. ಉಡುಪಿ ನಗರ ಮಟ್ಟದ ವಿಜಯ ದಶಮಿಯ ಸಂಭ್ರಮದ ಹಿನ್ನಲೆಯಲ್ಲಿ ನೂರಾರು ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು. ಡಯನಾ ಸರ್ಕಲ್ ಬಳಿ ದ್ವಜ ವಂದನೆಯ ಬಳಿಕ ಶಿಸ್ತು ಬದ್ದವಾದ ಪಥ ಸಂಚಲನ ನಡೆಸುವ ಮೂಲಕ ವಿಜಯ ದಶಮಿಯನ್ನು ಆಚರಿಸಿಕೊಂಡರು. ಪಥ ಸಂಚಲನ ಡಯನಾ ಸರ್ಕಲ್ ನಿಂದ ಜೋಡುಕಟ್ಟೆ ತನಕ ಸಾಗಿ ಮತ್ತೆ ಡಯನಾ ಸರ್ಕಲ್ ಬಳಿ ಸಮಾಪನಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

Related posts

Leave a Reply

Your email address will not be published. Required fields are marked *