Header Ads
Breaking News

ಪರಿಸರ ದಿನಾಚರಣೆಯ ಅಂಗವಾಗಿ ಕಸ ವಿಲೇವಾರಿ ಜಾಗೃತಿ ಆಂದೋಲನ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 7ನೇ ಪಡೆ, ಮಂಗಳೂರು ಘಟಕದಿಂದ ವಿಶ್ವ ಪರಿಸರ ದಿನಾಚರಣೆಯೊಂದಿಗೆ ಕಸ ವಿಲೇವಾರಿ ಬಗ್ಗೆ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಟ್ಟು ನಾಡನ್ನು ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಿತು. ಘಟಕದ ಕಮಾಂಡೆಂಟ್ ಜನಾರ್ಧನ ಅವರು ಗಿಡವನ್ನು ನೆಟ್ಟು ಹಸಿ ಕಸ ಹಾಗೂ ಒಣಕಸವನ್ನು ವಿಂಗಡಿಸುವ ಕೇಂದ್ರವನ್ನು ಉದ್ಘಾಟಿಸಿ, ಬಳಿಕ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಹಾಯಕ ಕಮಾಂಡೆಂಟ್ ಶರತ್ ಎಂಎ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನಾ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಕೃ? ಮೂಲ್ಯ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ರಾಜು, ಘಟಕ ಅಧಿಕಾರಿಗಳು ಮತ್ತು ಕುಟುಂಬದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *