Header Ads
Header Ads
Breaking News

ಇಂದು ಎಲ್ಲೆಡೆ ಶಿವರಾತ್ರಿ ಸಂಭ್ರಮ ಶಿವಾಲಯದಲ್ಲಿ ಪೂಜಾಭಿಷೇಕ ಭಕ್ತಿಯಿಂದ ಪೂಜಿಸಿದ ಭಕ್ತರು

ಇಂದು ಎಲ್ಲೆಡೆ ಶಿವರಾತ್ರಿ ಸಂಭ್ರಮ. ಈ ಹಿನ್ನಲೆಯಲ್ಲಿ ಉಡುಪಿಯ ಎಲ್ಲಾ ಶಿವಾಲಯಗಳಲ್ಲಿ ಪೂಜಾಭಿಷೇಕ ವೈಭವದಿಂದ ನಡೆಯಿತು.ಅಭಿಷೇಕ ಪ್ರಿಯ ಈಶ್ವರನ ಇಂದು ಪೂಜಿಸುವ, ಆರಾಧಿಸುವ ಪರ್ವಕಾಲ. ಈ ಪರ್ವಕಾಲದಲ್ಲಿ ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ದೀಪದೆಣ್ಣೆ ಹಾಕಿ ಕೈಮುಗಿದು ಇಡೀ ದಿನ ಉಪವಾಸ ವೃತಾಚರಣೆ ಮಾಡುತ್ತಾರೆ.

v

ಈ ಆಚರಣೆಯಲ್ಲಿ ಭಜನೆ, ಮಂತ್ರಗಳನ್ನು ಉಚ್ಚರಿಸುವ ಮೂಲಕ ಶಿವನನ್ನು ಆರಾಧಿಸುತ್ತಾರೆ.ಉಡುಪಿಯ ಎಲ್ಲಾ ಶಿವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಸೀಯಾಳಭಿಷೇಕ, ಹಾಲಿನ ಅಭಿಷೇಕ ಸೇರಿದಂತೆ ಪಂಚಾಮೃತ ಅಭಿಷೇಕ ನಡೆಯಿತು. ಇನ್ನು ಮಾಬುಕಳದ ಬಾಳೆಕುದ್ರು ಮಠದಲ್ಲಿರುವ ಶಿವನ ದೇವಾಲಯದಲ್ಲಿರುವ ಪುರಾತನ ಲಿಂಗಕ್ಕೆ ಮಠದ ನೃಸಿಂಹಾಶ್ರಮ ಸ್ವಾಮೀಜಿ ವಿಶೇಷ ಪೂಜೆ, ಅಭಿಷೇಕ ನಡೆಸಿದರು. ಇಂದು ಶಿವಲಿಂಗಕ್ಕೆ ಪೂಜೆ, ಅಭಿಷೇಕ, ಉಪವಾಸ ನಡೆಸಿ ರಾತ್ರಿ ಶಿವನ ಮಂತ್ರ ಪಠಿಸಿ ಭಜನೆ ಮಾಡಿದಲ್ಲಿ ಎಲ್ಲಾ ಪಾಪ ಪರಿಹಾರ ಆಗುವುದು ಎಂಬ ನಂಬಿಕೆಯಿದೆ.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply