Header Ads
Header Ads
Header Ads
Breaking News

ಗುರುವಾಯನಕೆರೆಯಲ್ಲಿ ಪಾಳು ಬಿದ್ದ ಬಸ್ ತಂಗುದಾಣ ಸಂಚಾರ ದಟ್ಟನೆ ತಗ್ಗಿಸುವ ಉದ್ದೇಶದಿಂದ ನಿರ್ಮಾಣ ಕಲ್ಲಂಗಡಿ ಮಾರುವ ಅಂಗಡಿಯಾಗಿ ಬದಲಾವಣೆ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಪ್ರಯಾಣಿಕರ ಉಪಯೊಗಕ್ಕೆಂದು ನಿರ್ಮಿಸಿದ ಬಸ್ ತಂಗುದಾಣವು ಇದೀಗ ಉಪಯೋಗಕ್ಕೆ ಬಾರದಂತಾಗಿದೆ. ಗುರುವಾಯನಕೆರೆಯಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಸ್ವತಃ ಶಾಸಕರೇ ಮುತುವರ್ಜಿ ವಹಿಸಿ ನಿರ್ಮಿಸಿದಂತಹ ಬಸ್ ತಂಗುದಾಣ ಈಗ ಅಧಿಕಾರಿಗಳ ನಿರ್ಲಕ್ಷದಿಂದ ದ್ವಿಚಕ್ರ ವಾಹನ ಇರಿಸುವ ಶೆಡ್ ಆಗಿ ಮತ್ತು ಕಲ್ಲಂಗಡಿ ಮಾರುವ ಅಂಗಡಿಯಾಗಿ ಬದಲಾಗಿದೆ.

ಜಂಕ್ಷನ್ನ್‌ನಲ್ಲಿ ಬಸ್ ನಿಲ್ಲಿಸಬಾರದೆಂಬ ಆದೇಶವಿದ್ದರೂ ಅದನ್ನು ಕಡೆಗಣಿಸಿ ಜನರನ್ನು ಜಂಕ್ಷನ್‌ನಲ್ಲೆ ಇಳಿಸಿ ಹೋಗುತ್ತಿದ್ದು ಟ್ರಾಫಿಕ್ ಪೋಲಿಸರ ನಿರ್ಲಕ್ಷದಿಂದ ಜನರ ತೆರಿಗೆ ಹಣದಿಂದ ಕಟ್ಟಿದ ತಂಗುದಾಣವು ಪಾಳುಬೀಳುವಂತಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಇತ್ತಕಡೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ವರದಿ: ಅಭಿಷೇಕ್ ಬೆಳ್ತಂಗಡಿ

Related posts

Leave a Reply