Header Ads
Header Ads
Header Ads
Breaking News

ಇಂದು ನಡೆಯಿತು ಬಲು ಅಪರೂಪದ ಕಂಕಣ ಸೂರ್ಯಗ್ರಹಣ : ಖಗೋಳ ವಿದ್ಯಾಮಾನವನ್ನು ಕಣ್ತುಂಬಿಕೊಂಡ ಜನ

 ಬಲು ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ನಡೆದಿದೆ. ಕರ್ನಾಟಕದಲ್ಲಿ ಬೆಳಿಗ್ಗೆ 8.04ಕ್ಕೆ ಆರಂಭವಾದ ಗ್ರಹಣ 11.03ರ ಸಮಯಕ್ಕೆ ಅಂತ್ಯವಾಯಿತು. ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಮಂಗಳೂರಿನಲ್ಲಿ ಸುಮಾರು 9:24ರಿಂದ 9:25ರ ಅವಧಿಯಲ್ಲಿ ಕಂಕಣ ರೂಪದಲ್ಲಿ ಸೂರ್ಯಗ್ರಹಣ ಗೋಚರಿಸಿತು. ನೆರಳಿನ ಜತೆ ತಂಪಾದ ವಾತಾವರಣದಲ್ಲಿ ಖಗೋಳದ ಕೌತುಕ ವೀಕ್ಷಕರಿಗೆ ಮುದ ನೀಡಿತು. ಮಂಗಳೂರಿನಲ್ಲಿ ಶೇ.93ರಷ್ಟು ಪ್ರಮಾಣದಲ್ಲಿ ಕಂಕಣ ರೂಪ ಕಂಡುಬಂದಿದ್ದರೆ, ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇನ್ನು ಮಂಗಳೂರಿನ ಪದುವ ಕಾಲೇಜು ಆವರಣದಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಖಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಯಂತ್ ಅವರ ನೇತೃತ್ವದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘದ ನೇತೃತ್ವದಲ್ಲಿ ಈ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಟೆಲಿಸ್ಕೋಪ್ ಮೂಲಕ ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗ್ರಹಣವನ್ನು ವೀಕ್ಷಿಸಿದರು. ಇದಕ್ಕಾಗಿ ವಿಶೇಷ ಕನ್ನಡಕಗಳ ವ್ಯವಸ್ಥೆಯನ್ನ ಮಾಡಲಾಗಿತ್ತು. ಜೊತೆಗೆ ಪಣಂಬೂರು ಬೀಚ್‍ನಲ್ಲೂ ಖಗೋಳಾಸಕ್ತರು ಗ್ರಹಣ ವೀಕ್ಷಣೆ ಮಾಡಿದರು. 

Related posts

Leave a Reply

Your email address will not be published. Required fields are marked *