Header Ads
Breaking News

ಇಂದು ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಹಿನ್ನೆಲೆ : ಖಾಸಗಿ ಬಸ್‌ನಿಂದ ಉಚಿತ ಸೇವೆ!

ನರೇಂದ್ರ ಮೋದಿಯವರು ಇಂದು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇನ್ನು ಮಂಗಳೂರಿನ ಮೋದಿ ಅಭಿಮಾನಿ ಬಳಗದವರು ಉಚಿತ ಬಸ್ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿನ್ನಿಗೋಳಿಯಿಂದ ಮೂಡಬಿದ್ರೆ ಮತ್ತು ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಎನ್ನುವ ಖಾಸಗಿ ಬಸ್ ಇಂದು ಉಚಿತ ಸೇವೆ ನೀಡುತ್ತಿದೆ. ಬೆಳಿಗ್ಗೆ 7.00ಗಂಟೆಗೆ ಕಿನ್ನಿಗೋಳಿಯ ಬಸ್ ನಿಲ್ದಾಣದಿಂದ ಆರಂಭಗೊಂಡ ಉಚಿತ ಟ್ರಿಪ್‌ಗೆ ಬಿಜೆಪಿ ಮುಖಂಡರು ಚಾಲನೆ ನೀಡಿದರು. ಕಿನ್ನಿಗೋಳಿಯಿಂದ ಮೂಡಬಿದ್ರೆಗೆ ಹೊರಟು ಅಲ್ಲಿಂದ ಕಿನ್ನಿಗೋಳಿಗೆ ವಾಪಾಸ್ಸಾಗಿ ನಂತರ ಮಂಗಳೂರು ತಲುಪಲಿದ್ದು ಹೀಗೆ ಎರಡು ಟ್ರಿಪ್ ಇದೇ ಮಾರ್ಗವಾಗಿ ಬಸ್ ಸಂಚರಿಸಲಿದೆ.

Related posts

Leave a Reply

Your email address will not be published. Required fields are marked *