Header Ads
Header Ads
Breaking News

ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಮಂಗಳೂರಿನ ಸಂತ ಪೀಟರರ ಶಾಲೆಯಲ್ಲಿ ಮಾತ್ರೆ ವಿತರಣೆ

 

ಮಕ್ಕಳಲ್ಲಿ ಜಂತುಹುಳ ನಿವಾರಣೆಗಾಗಿ ಆ.೧೦ರಂದು ರಾಷ್ಟೀಯ ಜಂತುಹುಳ ನಿವಾರಣಾ ದಿನವನ್ನು ಮಂಗಳೂರಿನ ಸಂತ ಪೀಟರರ ಅನುದಾನಿತ ಹಿರಿಯ ಪಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
೧ರಿಂದ ೧೯ ವರ್ಷದವರೆಗಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಸರಕಾರಿ ಶಾಲೆ ಕಾಲೇಜು ಮತ್ತು ಅಂಗವನಾಡಿ ಕೇಂದ್ರಗಳಲ್ಲಿ ಉಚಿತವಾಗಿ ವಿತರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಸಂತ ಪೀಟರರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಯರಾದ ಪೆಟ್ರಿಸಿಯ ಜೆ.ಲೋಬೋ ಮಾತನಾಡಿ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದೆ. ವರ್ಷದಲ್ಲಿ ೨ ಬಾರಿ ಈ ಮಾತ್ರೆಯನ್ನ ನಿಡಲಾಗುತ್ತಿದೆ. ಇದನ್ನು ಮಕ್ಕಳು ಸೇವಿಸುವುದರಿಂದ್ದ ಜಂತುಹುಳದ ಸಮಸ್ಯೆಯಿಂದ ವಿಮುಕ್ತರಾಗಬಹುದು ಎಂದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು

ವರದಿ: ನಾಗರಾಜ್ ಮಂಗಳೂರು

Related posts

Leave a Reply