Header Ads
Header Ads
Breaking News

ಇಂದು ಲಕ್ಷಾಂತರ ಜನರ ಪಾಲಿನ ಜೀವ ನದಿ ನಂದಿನಿಯ ಹುಟ್ಟುಹಬ್ಬ

ಇಂದು ಲಕ್ಷಾಂತರ ಜನರ ಪಾಲಿನ ಜೀವ ನದಿ ನಂದಿನಿಯ ಹುಟ್ಟುಹಬ್ಬ ದಿನ, ನಂದಿನಿ ನದಿ ಇಂದು ಅಂದರೆ ಮಾಘ ಮಾಸದ ಹುಣ್ಣಿಮೆಯ ಶುಭ ದಿನದಂದು ಭೂಮಿಗೆ ನದಿಯಾಗಿ ಹರಿದಿದ್ದಾಳೆ ಎಂಬ ಕಥೆ ಪುರಾಣದಲ್ಲಿ ಇದೆ ಆ ಪ್ರಯುಕ್ತ ಇಂದು ಕಟೀಲಿನಲ್ಲಿ ವಿಶೇಷ ಪೂಜೆ ಪುನಸ್ಕಾರ ಆ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.

ಇಂದು ನಂದಿನಿ ಅವತರಣ ದಿನ ಅಂದರೆ ಆಕೆ ಜನ್ಮ ತಾಳಿದ ದಿನ. ನಂದಿನಿ ನದಿಯ ಕಟಿ ಪ್ರದೇಶದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ನೆಲೆನಿಂತು ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ, ಇಂದು ಕಟೀಲು ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ನಂದಿನಿ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ದುರ್ಗೆಗೆ ನಂದಿನಿ ನದಿಯ 108ಕೊಡ ನೀರಿನ ಅಬಿಷೇಕ, ನಂದಿನಿ ಗೋವಿನ ಪ್ರತಿರೂಪ ಆದರಿಂದ ಹಾಲಿನ ಅಬಿಷೇಕ, ಎಳನೀರಿನ ಅಬಿಷೇಕ ಮತ್ತಿತರ ದಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ದೇವಳಕ್ಕೆ ಬೇಟಿ ನೀಡುವ ಭಕ್ತರಿಗೆ ಕ್ಷೀರ ಪಾಯಸವನ್ನು ಉಣ ಬಡಿಸಲಾಗುತ್ತದೆ, ಪ್ರಸಿದ್ದ ಸಂಗೀತ ವಿದ್ವಾಂಸರಾದ ನಾರಾಯಣ ದಾಸ ಅವರ ದುರ್ಗೆಯ ಸ್ವರಚಿತ ಕೀರ್ತನೆಗಳು ದೇವಳದಲ್ಲಿ ನಡೆಯುತ್ತದೆ,ಸುಮಾರು 40 ಕಿಲೋ ಮೀಟರ್ ಉದ್ದವಿರುವ ನಂದಿನಿ ನದಿ ಮೂಡಬಿದ್ರೆಯ ಮೀಜಾರಿನ ಕನಕ ಬೆಟ್ಟುವಿನ ನಾಗ ಬನವೊಂದರ ಸಮೀಪ ಪುಟ್ಟ ಕಾನನ ಮಧ್ಯೆ ಉಗಮವಾಗಿದ್ದಾಳೆ, ಅಲ್ಲಿಂದ ಬೆಳೆದು ದೊಡ್ದವಳಾಗುತ್ತಾ ಮುಚ್ಚೂರು, ಕಟೀಲು, ಎಕ್ಕಾರು, ಶಿಬರೂರು, ಚೇಳಾಯರು, ಪಾವಂಜೆ ಮೂಲಕ ಹಾದು ಹೋಗಿ ಸಸಿಹಿತ್ಲುವಿನ ಚಿತ್ರಾಪುವಿನಲ್ಲಿ ಸಮುದ್ರವನ್ನು ಸೇರುತ್ತಾಳೆ. ನದಿಗೆ ಅಲ್ಲಲ್ಲಿ ಹಲವಾರು ಕಡೆಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ, ಸುಮಾರು ಒಂದುವರೆ ಸಾವಿರ ಎಕ್ಕರೆ ಕೃಷಿ ಪ್ರದೇಶಕ್ಕೆ ಇದರಿಂದ ಅನುಕೂಲವಾಗಿದೆ.

ಪುರಾಣ ಕಥೆಯಲ್ಲಿ ಬರುವಂತೆ ಭೂಮಿಯಲ್ಲಿ ಹನ್ನೆರಡು ವರ್ಷಗಳ ಬರಗಾಲ, ತುತ್ತು ಅನ್ನಕ್ಕಾಗಿ ಜನರ ಪರದಾಟ ಬರಗಾಲ ನಿವಾರಣೆಗಾಗಿ ಜಾಬಾಲಿ ಮಹರ್ಷಿ ಯಜ್ಞ ಮಾಡಲೆಂದು ಯೋಚಿಸಿ ಕಾಮದೇನುವನ್ನು ಕರೆ ತರಲು ದೇವಲೋಕ್ಕೆ ಹೋಗುತ್ತಾನೆ, ಮುನಿ ಜಾಬಾಲಿಯ ಮನವಿಗೆ ಸ್ಪಂದಿಸಿದ ದೇವೇಂದ್ರ, ಕಾಮದೇನು ವರುಣ ಲೋಕಕ್ಕೆ ಹೋಗಿರುದರಿಂದ ಆಕೆಯ ಮಗಳು ನಂದಿನಿಯನ್ನು ಕಳುಹಿಸಲು ಮುಂದಾಗುತ್ತಾನೆ ಆದರೆ ನಂದಿನಿ, ಭೂಲೋಕದ ಸ್ವಾರ್ಥ ಪ್ರಪಂಚಕ್ಕೆ ಬರಲಾರೆ ಎಂದು ಜಾಬಾಲಿ ಮುನಿಯನ್ನು ನಿಂದಿಸುತ್ತಾಳೆ, ಪರಿ ಪರಿಯಾಗಿ ಬೇಡಿದರೂ ಬರಲು ಒಪ್ಪದ ನಂದಿನಿಯನ್ನುಜಾಬಾಲಿ ಮುನಿ ನದಿಯಾಗಿ ಹುಟ್ಟಿ ಬಾ ಎಂದು ಶಪಿಸುತ್ತಾನೆ, ಆಗ ನಂದಿನಿ ಜಾಬಾಲಿ ಮುನಿಯಲ್ಲಿ ಕ್ಷಮೆ ಯಾಚಿಸಿದಾಗ, ಆದಿ ಮಾಯೆಯನ್ನು ಸ್ತುತಿಸು ಅವಳೇ ನಿನಗೆ ಶಾಪ ವಿಮೋಚನೆಯ ದಾರಿ ತೋರಿಸುತ್ತಾಳೆ ಎಂದು ಪರಿಹಾರ ಸೂಚಿಸುತ್ತಾನೆ, ನಂದಿನಿ ಆದಿ ಮಾಯೆಯನ್ನು ಸ್ತುತಿಸಲಾದಾಗ, ಆದಿ ಮಾಯೆ ನಂದಿನಿಗೆ ದುಖಿಸದಿರು ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯ ನೀಡುತ್ತಾಳೆ. ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕನಕಗಿರಿಯಲ್ಲಿ ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು. ಕಟಿ ಪ್ರದೇಶದಲ್ಲಿ ದುರ್ಗೆಯು ನೆಲೆ ನಿಲ್ಲುವಳು ಎಂದು ಪ್ರತೀತಿ ಇದೆ. ಒಟ್ಟಿನಲ್ಲಿ ನದಿ ಒಂದರ ಹುಟ್ಟು ಹಬ್ಬ ಆಚರಣೆ ವಿಶೇಷವೇ ಸರಿ.

Related posts

Leave a Reply

Your email address will not be published. Required fields are marked *