Breaking News

ಇಂಧನ ವಾಹನಗಳ ತಯಾರಿಕೆ ಮುಂದೆ ಇಲ್ಲ, ವೋಲ್ವೊದಿಂದ ಬರೇ ವಿದ್ಯುತ್ ಚಾಲಿತಕ್ಕೆ ಹೆಜ್ಜೆ

ಸ್ವೀಡನ್ನ ಪ್ರಮುಖ ಕಾರು ತಯಾರಿಕಾ ಸಂಸ್ಥೆ ವೋಲ್ವೊ, ಇನ್ನು ಮುಂದೆ ಕೇವಲ ವಿದ್ಯುತ್ಚಾಲಿತ ಕಾರುಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
೨೦೧೯ರಿಂದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಎಲ್ಲ ಕಾರುಗಳು ವಿದ್ಯುತ್ ಚಾಲಿತ ಕಾರುಗಳೇ ಆಗಿರಲಿವೆ. ಇಂಧನ ಚಾಲಿತ ಕಾರುಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. ನಮ್ಮ ಈ ತೀರ್ಮಾನ ಜಾಗತಿಕ ವಾಹನ ತಯಾರಿಕೆ ಕ್ಷೇತ್ರದಲ್ಲೇ ಅತ್ಯಂತ ಮಹತ್ವದ್ದು ಆಗಿದೆ ಎಂದು ಸಂಸ್ಥೆ ಹೇಳಿದೆ.
ವಿದ್ಯುತ್ ಚಾಲಿತ ಕಾರುಗಳಿಗೆ ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ?ಅಧಿಕಾರಿ ಹಕನ್ ಸ್ಯಾಮುಲ್ಸನ್ ತಿಳಿಸಿದ್ದಾರೆ. ಅವಧಿಯೊಳಗೆ ಸಂಪೂರ್ಣ ವಿದ್ಯುತ್ಚಾಲಿತ ಇದರಲ್ಲಿ ೩ ವಾಹನಗಳು ವೋಲ್ವೊ ಮಾದರಿಗಳಾಗಿರುತ್ತವೆ. ಉಳಿದೆರಡು ಕಾರುಗಳನ್ನು ಪೋಲ್ಸ್ಟಾರ್ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Related posts

Leave a Reply