Header Ads
Header Ads
Header Ads
Breaking News

ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಭೂತ ಸೌಲಭ್ಯದ ಕೊರತೆ ದೇಣಿಗೆ ಹಣ ಕೋಟಿಗಟ್ಟಲೆ ಇದ್ದರೂ ಉಪಯೋಗಕ್ಕಿಲ್ಲ ಭಕ್ತಾಧಿಗಳಿಗೆ ಧೂಳು ಹಾಗೂ ಕೆಸರು ಭಾಗ್ಯ

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಲವು ಮೂಲಭೂತ ಸಮಸ್ಯೆಗಳ ಕಾರಣದಿಂದಾಗಿ ಸುದ್ಧಿಯಲ್ಲಿದೆ. ಕ್ಷೇತ್ರದಲ್ಲಿ ಆರಾಧಿಸಲ್ಪಡುತ್ತಿರುವ ಸುಬ್ರಹ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ದೇಶ ಹಾಗೂ ವಿದೇಶಗಳಿಂದ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಈ ಕಾರಣಕ್ಕಾಗಿಯೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನೂ ರೂಪಿಸಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ಕ್ಷೇತ್ರಕ್ಕೆ ಭಕ್ತರು ಕೊಟ್ಟ ದೇಣಿಗೆಯ ಹಣವೇ ಕೋಟಿಗಟ್ಟಲೆ ಇದ್ದರೂ, ಅದನ್ನು ಸರಿಯಾಗಿ ವಿನಿಯೋಗಿಸದ ಕಾರಣ ಇದೀಗ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ಸ್ಥಳೀಯರಿಗೆ ಧೂಳು ಭಾಗ್ಯ ಹಾಗೂ ಕೆಸರು ಭಾಗ್ಯ ಸಿಗುವಂತಾಗಿದೆ.

Related posts

Leave a Reply