Header Ads
Breaking News

ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಲಕ್ಷದೀಪೋತ್ಸವ

ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲಕ್ಷದೀಪೋತ್ಸವ ನಡೆಯಿತು.


ಭಗವಾನ್ 1008 ಚಂದ್ರಪ್ರಭ ಸ್ವಾಮಿಗೆ ವಿಶೇಷ ಅಭಿಷೇಕ ನಡೆಯಿತು. ಭಟ್ಟಾರಕ ಸ್ವಾಮೀಜಿ ಆಶೀವರ್ಚನ ನೀಡಿದರು. ಭಗವಾನ್ 1008 ಚಂದ್ರಪ್ರಭ ಸ್ವಾಮಿಗೆ ಸುಮಾರು 2 ಕಿಲೋ ಬೆಳ್ಳಿಯಿಂದ ನಿರ್ಮಿಸಿದ ಮುಕ್ಕೊಡೆಯನ್ನು ಮಠದಿಂದ ಮೆರವಣಿಗೆಯಲ್ಲಿ ತಂದು ಸಾವಿರ ಕಂಬದ ಬಸದಿಗೆ ಉಜಿರೆಯ ನಾಬಿ ರಾಜ್ ಪೂವಣಿ- ಜಯಮಾಲಾ ಕುಟುಂಬದವರು ಒಪ್ಪಿಸಿದರು. ಧವಲತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಯುವ ಪ್ರತಿಭೆ ದೀಪಾನ್ಸಿ, ಪ್ರದೀಪ್ ಜೈನ್ ಬೆಂಗಳೂರು ಅವರಿಂದ ಭರತನಾಟ್ಯ ಪ್ರದರ್ಶನವಿತ್ತರು. ಆರ್ಗನ್ ಡೋನೇಶನ್ ಇಂಡಿಯಾ ಪೌಂಡೇಶನ್‌ನ ಚೇರ್‌ಮೆನ್ ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕ ಲಾಲ್ ಗೋಯಲ್ ಅವರು ಮುಖ್ಯ ಅತಿಥಿಯಾಗಿ ಅಗಮಿಸಿದ್ದರು.

ಈ ಸಂದರ್ಭ ಬಸದಿಗಳ ಮುಕ್ತೇಸರರಾದ ಪಟ್ನ ಶೆಟ್ಟಿ, ಸುದೇಶ್ ಕುಮಾರ್, ದಿನೇಶ್ ಬೆಟ್ಕೇರಿ, ಗುಣಪಾಲ ಹೆಗ್ಡೆ, ಡಾ. ಮಹಾವೀರ್ ಆಯುಷ್, ವಿಜಯಲಕ್ಷ್ಮೀ ಅರಿಗ, ಪ್ರೇಮ್ ಕುಮಾರ್, ಬಾಹುಬಲಿ ಪ್ರಸಾದ್, ಮಂಜುಳ ಕೆ. ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *