Header Ads
Header Ads
Breaking News

ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆ ನಶಿಸಿ ಹೋಗುತ್ತಿದೆ :ಎಚ್.ಡಿ. ಕುಲಾಲ್ ಹೇಳಿಕೆ

ಕುಂಬಾರಿಕೆ ಕಲೆಯ ಬಗ್ಗೆ ವೆಬ್ ಸೈಟ್ ಮತ್ತು ಬ್ರಾಂಡ್‌ನ ಉದ್ಘಾಟನಾ ಸಮಾರಂಭವು ಕಾರ್ಕಳದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಲಾಲ್ ತಿಳಿಸಿದರು.ಈ ಬಗ್ಗೆ ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಂಬಾರಿಕೆ ಎಂಬುದು ತುಂಬಾ ಹಳೆಯ ಕಲೆ ಮತ್ತು ಉದ್ಯೋಗವಾಗಿದೆ ಕಾರಣಾಂತರದಿಂದ ಈ ಕಲೆ ನಶಿಸಿ ಹೋಗುವ ಸ್ಥಿತಿಯಲ್ಲಿದೆ ಜನರಲ್ಲಿ ಜಾಗೃತಿ ಮೂಡಿಸಲು ಈ ವೆಬ್ ಸೈಟ್ ಲಾಂಚ್ ಮಾಡುತ್ತಿದ್ದೇವೆ ಎಂದು ಹೇಳಿದರು.ನಂತರ ಮಾತನಾಡಿದ ಶಂಕರ ಕುಲಾಲ್‌ರವರು ನಾವು ಈಗಾಗಲೇ ಕಾರ್ಕಳದಲ್ಲಿ ಕುಂಬಾರಿಕೆ ಕಲೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಮಳಿಗೆಯನ್ನು ಆರಂಭ ಮಾಡಿದ್ದೇವೆ ನಾವು ಮೂರು ವರ್ಷದಿಂದ ಉತ್ತಮವಾದ ಪಾತ್ರೆಗಳನ್ನು ಮಾಡಬಹುದೆಂದು ಅಧ್ಯಯನ ಮಾಡಿ ಈಗಿನ ಜನತೆಗೆ ಯಾವ ರೀತಿ ಮಣ್ಣಿನ ವಸ್ತುಗಳು ಬೇಕು ಎಂದು ನಾವು ತಯಾರಿಸಿದ್ದೇವೆ. ಜನರಿಗೆ ಮಣ್ಣಿನ ಪಾತ್ರೆಗಳ ಮಹತ್ವ ಗೊತ್ತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರತ್ ಸಾಣೂರು, ದಿವಾಕರ ಎಚ್ಡಿ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *