Header Ads
Breaking News

ಅರೆಬರೆ ಕಾಮಗಾರಿ : ಉಡುಪಿ ಟು ಮಣಿಪಾಲ ಹೆದ್ದಾರಿ ಕೆಸರುಮಯ

ಇದು ಉಡುಪಿ ಟು ಹೆಬ್ರಿ ಹೆದ್ದಾರಿ ಕಾಮಗಾರಿಯ ಎಪೆಕ್ಟ್. ಅರೆಬರೆ ಕಾಮಗಾರಿ ವಾಹನ ಸವಾರರಿಗೆ ತೊಂದರೆ ಒಡ್ಡುತ್ತಿದೆ. ಇನ್ನೂ ಮುಂಗಾರು ಸರಿಯಾಗಿ ಆರಂಭವಾಗಿಲ್ಲ.. ಕಾಮಗಾರಿಯ ನಿಜಸ್ವರೂಪ ಬಯಲಾಗುತ್ತಿದೆ.

ಬಹು ಬೇಡಿಕೆಯ ಮಲ್ಪೆ ಮೊಳಕಾಲ್ಮೂರಿನಿಂದ ತೀರ್ಥಹಳ್ಳಿಯ ತನಕ ರಸ್ತೆಯ ಅಗಲೀಕರಣ ಕಾರ್ಯಕ್ಕೆ ಚಾಲನೆ ಏನೋ ದೊರಕಿದೆ. ಆದ್ರೆ ಕಾಮಗಾರಿ ಆರಂಭವಾಗಿರೋದು ಉಡುಪಿ ನಗರದಿಂದ.. ಈಗಾಗಲೇ ಉಡುಪಿ ನಗರದಿಂದ ಹಿಡಿದು ಪರ್ಕಳ ತನಕ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಭೂ ಸ್ವಾಧೀನದ ನಂತರ ಕಾಮಗಾರಿ ಆರಂಭ ಆಗಿರೋದು ಫೆಬ್ರವರಿಯಿಂದ ಆದ್ರೆ ಇದುವರೆಗೆ ಎಲ್ಲಾ ಕಾಮಗಾರಿ ಪೂರ್ಣವಾಗಿಲ್ಲ. ಅಲ್ಲಲ್ಲಿ ಚರಂಡಿ ಕೂಡಾ ಅರೆ ಬರೆ ಕಾಮಗಾರಿ ನಡೆಸಲಾಗಿದೆ. ಇಂದ್ರಾಳಿ ಬಳಿಯ ರೈಲ್ವೆ ಬ್ರಿಜ್ ಬಳಿ ಅಗಲೀಕರಣ ಪ್ರಕ್ರೀಯೆ ಸೇರಿದಂತೆ ಎಲ್ಲಾ ಕಾಮಗಾರಿಗಳು ಅಧಂಬರ್ದವಾಗಿದೆ. ಇದರಿಂದ ರಸ್ತೆ ಎಲ್ಲಾ ಕೆಸರುಮಯವಾಗಿದ್ದು ಅಲ್ಲಲ್ಲಿ ಹೊಂಡದಲ್ಲಿ ನೀರು ತುಂಬಿದೆ. ರಸ್ತೆ ಕೆಸರುಮಯವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಎಂಜಿಎಂ ಕಾಲೇಜು ಮಣಿಪಾಲದ ಹಲವು ಕಡೆ ಅರೆ ಬರೆ ಕಾಮಗಾರಿಯ ಎಹೆಕ್ಟ್ ಕಾಣ ಸಿಗುತ್ತಿದೆ. ಈಗಾಗಲೇ ಸಾಧಾರಣ ಮಳೆ ಸುರಿದಿದೆ. ಇನ್ನೂ ಮುಂಗಾರು ಸರಿಯಾಗಿ ಆರಂಭವಾಗಿಲ್ಲ. ಈಗಲೇ ಈ ಪರಿಸ್ಥಿತಿ ಆದ್ರೆ ಮುಂದೇನು ಎಂಬ ಆತಂಕಕ್ಕೆ ಕಾರಣವಾಗಿದೆ. ಅರೆಬರೆ ಕಾಮಗಾರಿಯ ವಿರುದ್ದ ಸ್ಥಳೀಯರೂ ಸಹ ಹಿಡಿಶಾಪ ಹಾಕುತ್ತಿದ್ದಾರೆ.

Related posts

Leave a Reply

Your email address will not be published. Required fields are marked *