Header Ads
Header Ads
Breaking News

ಇನ್ನೂರು ರೂಪಾಯಿ ಹೊಸ ನೋಟು, ಮುಂಬಯಿಯಲ್ಲಿ ಮುದ್ರಣ ಆರಂಭ

ಇನ್ನೂರು ರೂಪಾಯಿ ನೋಟು ಬಿಡುಗಡೆಗೆ ರಿಸರ್ವ್ ಬ್ಯಾಂಕ್ ತೀರ್ಮಾನಿಸಿರುವಂತೆಯೇ ನೋಟು ಮುದ್ರಣ ಆರಂಭಗೊಂಡಿದೆ. ರಿಸರ್ವ್ ಬ್ಯಾಂಕ್ನಿಂದ ಬೇಡಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೋಟು ಮುದ್ರಣ ಘಟಕದಲ್ಲಿ ೨೦೦ ರೂ. ನೋಟು ಮುದ್ರಣ ಆರಂಭಗೊಂಡಿದೆ.
ಈ ನೋಟು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳನ್ನು ಹೊಂದಿರಲಿದೆ. ಸದ್ಯ ಇದರ ಗುಣಮಟ್ಟ ಮತ್ತು ಭದ್ರತೆಗಳ ಕುರಿತ ಪರೀಕ್ಷೆ ಮಧ್ಯಪ್ರದೇಶದ ಹೊಸಂಗಾಬಾದ್ನ ಸರ್ಕಾರಿ ಮುದ್ರಣಾಲಯದಲ್ಲಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಇನ್ನೂರು ರೂ. ನೋಟು ಬಿಡುಗಡೆಯಿಂದ ದಿನನಿತ್ಯದ ವ್ಯವಹಾರಗಳು ಇನ್ನೂ ಸುಗಮವಾಗಲಿದೆ ಎಂದು ಎಸ್ಬಿ‌ಐ ಗ್ರೂಪ್ನ ಮುಖ್ಯ ಆರ್ಥಿಕ ತಜ್ಞ ಕಾಂತಿ ಘೋಷ್ ಹೇಳಿದ್ದಾರೆ. ಅಪನಗದೀಕರಣ ಬಳಿಕ ಕೇಂದ್ರ ಸರ್ಕಾರ ೨೦೦ ರೂ. ನೋಟು ಹೊರತರುವ ತೀರ್ಮಾನ ಮಾಡಿತ್ತು. ಈ ಪ್ರಸ್ತಾವನೆಯನ್ನು ರಿಸರ್ವ್ ಬ್ಯಾಂಕ್ ಅನುಮೋದಿಸಿತ್ತು. ೨,೦೦೦
ರೂ. ಮತ್ತು ೫೦೦ ರೂ. ಹೊಸ ನೋಟುಗಳ ನಡುವಿನ ಅಂತರವನ್ನು ೨೦೦ರ ನೋಟು ತುಂಬಲಿದೆ ಎಂದು ಘೋಷ್ ಹೇಳಿದ್ದಾರೆ.

Related posts

Leave a Reply