Breaking News

ಇನ್ಫೋಸಿಸ್‌ನಿಂದ ಜನಾಂಗೀಯ ತಾರತಮ್ಯ, ಅಮೆರಿಕದ ಟೆಕ್ಸಾಸ್ ಕೋರ್ಟಿನಲ್ಲಿ ಎರಿನ್‌ರಿಂದ ಮೊಕದ್ದಮೆ

ಇನ್ಫೊಸಿಸ್ನ ಅಮೆರಿಕದ ವಲಸೆ ವಿಭಾಗದ ಮಾಜಿ ಮುಖ್ಯಸ್ಥ ಎರಿನ್ ಗ್ರೀನ್ ಅವರು ಸಂಸ್ಥೆಯ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಸಂಸ್ಥೆಯು ತಾರತಮ್ಯ ನೀತಿ ಅನುಸರಿಸಿತ್ತು ಎಂದು ಅವರು ಅಮೆರಿಕದ ಟೆಕ್ಸಾಸ್ನ ಜಿಲ್ಲಾ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ವಿಚಾರಣೆ ನಡೆಸಲು ಒತ್ತಾಯಿಸಿದ್ದಾರೆ. ಸಂಸ್ಥೆಯ ಜಾಗತಿಕ ವಲಸೆ ವಿಭಾಗದ ಮುಖ್ಯಸ್ಥ ವಾಸುದೇವ್ ನಾಯಕ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿನೋದ್ ಹಂಪಾಪುರ ಅವರ ವಿರುದ್ಧ?ಎರಿನ್ ಅವರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಇವರಿಬ್ಬರೂ ದಕ್ಷಿಣ ಏಷ್ಯಾದ ಅದರಲ್ಲೂ ಭಾರತದ ಉದ್ಯೋಗಿಗಳಿಗೆ ಹೆಚ್ಚು ಆದ್ಯತೆ ನೀಡುತ್ತ, ಜನಾಂಗ ಮತ್ತು ರಾಷ್ಟ್ರೀಯತೆಯ ಮೂಲ ಆಧರಿಸಿ ನನ್ನನ್ನು ಮತ್ತು ಇತರ ರಾಷ್ಟ್ರೀಯರನ್ನು ತಾರತಮ್ಯದಿಂದ ನಡೆಸಿಕೊಂಡಿದ್ದರು ಎಂದು ಎರಿನ್ ದೂರಿದ್ದಾರೆ.
ತಮ್ಮನ್ನು ಸಂಸ್ಥೆಯಿಂದ ಹೊರ ಹಾಕಿದ ವಿಧಾನವನ್ನೂ ಅವರು ಪ್ರಶ್ನಿಸಿದ್ದಾರೆ. ನಾಯಕ್ ಅವರ ನಾಯಕತ್ವದಡಿ ಕೆಲಸ ಮಾಡುತ್ತಿದ್ದ ಎರಿನ್ ಹೋದ ವರ್ಷವೇ ಸಂಸ್ಥೆ ತೊರೆದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ೧೦ ಸಾವಿರ ತಂತ್ರಜ್ಞರನ್ನು ನೇಮಿಸಿಕೊಳ್ಳುವುದಾಗಿ ಸಂಸ್ಥೆಯು ಇತ್ತೀಚೆಗಷ್ಟೇ ಪ್ರಕಟಿಸಿತ್ತು. ಈಗ ಅಮೆರಿಕದ ಮಾಜಿ ಉನ್ನತ ಅಧಿಕಾರಿಯೊಬ್ಬರು ಸಂಸ್ಥೆಯ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಹೊರಿಸಿದ್ದಾರೆ. ಇದು ಸಂಸ್ಥೆಯ ಸಿ‌ಇ‌ಒ ವಿಶಾಲ್ ಸಿಕ್ಕಾ ಅವರಿಗೆ ತೀವ್ರ ಮುಜುಗರ ಉಂಟು ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Related posts

Leave a Reply