Header Ads
Breaking News

IN-LAND RECEIVES TREMENDOUS RESPONSE TO ITS PROPERTY MELA 2021

ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಇನ್-ಲ್ಯಾಂಡ್ ಬಿಲ್ಡರ್ಸ್ ಆಯೋಜಿಸಿರುವ ಮೂರನೇ ವರ್ಷದ 20 ದಿನಗಳ ಪ್ರಾಪರ್ಟಿ-ಮೇಳ-2021 ಮಂಗಳೂರಿನ ನವಭಾರತ್ ವೃತ್ತ ಸಮೀಪದ ಇನ್‍ಲ್ಯಾಂಡ್ ಆರ್ನೇಟ್ ಇಲ್ಲಿ ನಡೆಯುತ್ತಿದ್ದು ಜನತೆಯಿಂದ ಅಭೂತಪೂರ್ವ ಸ್ಪಂದನೆ ದೊರಕಿದೆ.

ಈ ಪ್ರಾಪರ್ಟಿ ಮೇಳವನ್ನು ಫೆ 8ರಂದು ಉದ್ಘಾಟಿಸಲಾಗಿತ್ತು. ಇನ್-ಲ್ಯಾಂಡ್ ಆಯೋಜಿಸಿದ್ದ ಮೊದಲ ಎರಡು ಪ್ರಾಪರ್ಟಿ ಮೇಳಗಳು ಜನಪ್ರಿಯವಾದಂತೆಯೇ ಈ ಮೂರನೇ ಪ್ರಾಪರ್ಟಿ ಮೇಳವೂ ಅತ್ಯಂತ ಜನಪ್ರಿಯವಾಗಿ ಜನರ ಮನಸೂರೆಗೊಂಡಿದೆ. “ಕೋವಿಡ್ ಸಾಂಕ್ರಾಮಿಕದಿಂದಾಗಿ ಎಲ್ಲೆಡೆ ಇರುವ ನಿರಾಶಾದಾಯಕ ವಾತಾವರಣದ ನಡುವೆ ಈ ಬಾರಿ ಪ್ರಾಪರ್ಟಿ ಮೇಳ ನಡೆಸಬೇಕೇ ಅಥವಾ ಬೇಡವೇ ಎಂಬ ದೊಡ್ಡ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿತ್ತು. ಆದರೆ ಇನ್-ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಈ ಹಿಂದೆ ಯಾವತ್ತೂ ದೊರಕಿದ್ದ ಉತ್ತಮ ಸ್ಪಂದನೆಯನ್ನು ಗಮನಿಸಿ ನಾವು ಈ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಕೈಗೊಂಡೆವು. ನಾವು ಸರಿಯಾದ ನಿರ್ಧಾರವನ್ನೇ ಕೈಗೊಂಡೆವು ಎಂಬ ಸಮಾಧಾನ ಈಗ ನಮಗಿದೆ. ಈ ಪ್ರಾಪರ್ಟಿ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಜನರಿಗೆ ಇದು ಅತ್ಯುತ್ತಮ ಸಮಯ ಕೂಡ ಆಗಿದೆ. ಷೇರುಗಳು ಹಾಗೂ ಠೇವಣಿಗಳಲ್ಲಿ ಹೂಡಿಕೆ ಈಗಿನ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚು ರಿಸ್ಕ್ ಹೊಂದಿದೆ ಹಾಗೂ ರಿಯಲ್ ಎಸ್ಟೇಟ್ ಸ್ಥಿರ, ಸುರಕ್ಷಿತವಾಗಿದೆ ಎಂದು ಸಾಂಕ್ರಾಮಿಕದ ಸಂದರ್ಭ ಕಂಡು ಬಂದಿದೆ” ಎಂದು ಇನ್-ಲ್ಯಾಂಡ್ ಸಮೂಹದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾದ ಸಿರಾಜ್ ಅಹ್ಮದ್ ಹೇಳಿದರು.

ಇನ್-ಲ್ಯಾಂಡ್ ಕೂಡ ಇತ್ತೀಚೆಗೆ ಅತ್ಯಾಧುನಿಕ ವಾಣಿಜ್ಯ ಪ್ರಾಜೆಕ್ಟ್ -ಇನ್‍ಲ್ಯಾಂಡ್ ಬಿಸಿನೆಸ್ ಪಾರ್ಕ್ ಅನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಭಾರತ್ ಮಾಲ್ ಸಮೀಪ ಚಾಲನೆ ನೀಡಿದೆ. ಈ ವಾಣಿಜ್ಯ ಪ್ರಾಜೆಕ್ಟ್ ಸ್ಥಳೀಯ ಖರೀದಿದಾರರು ಹಾಗೂ ಎನ್ನಾರೈಗಳನ್ನು ಆಕರ್ಷಿಸುತ್ತಿದ್ದು ನಗರದ ಪ್ರಮುಖ ಭಾಗದಲ್ಲಿ ಕಚೇರಿ ಹೊಂದಲು ಬಯಸುವವರಿಗೆ ಇದು ಅನುಕೂಲವಾಗಲಿದೆ. ಮಂಗಳೂರು ಸ್ಮಾರ್ಟ್ ಸಿಟಿ ಎಂದು ಘೋಷಣೆಯಾದ ನಂತರ ಇಲ್ಲಿ ಐಟಿ ಸಹಿತ ಹೆಚ್ಚಿನ ಉದ್ಯಮಗಳಿಗೆ ಪೂರಕವಾಗಿದೆ. ಹಲವು ವೈದ್ಯರೂ ಈಗಾಗಲೇ ಬಹಳಷ್ಟು ದಟ್ಟಣೆಯಿರುವ ಕಂಕನಾಡಿ/ಫಳ್ನೀರ್ ಬದಲು ಇಲ್ಲಿ ತಮ್ಮ ಕ್ಲಿನಿಕ್ ಆರಂಭಿಸಲು ಉತ್ಸುಕತೆ ತೋರಿದ್ದಾರೆ. ಒಂದು ಪ್ರಯೋಜನಕಾರಿ ಅಂಶವೆಂದರೆ ಗ್ರಾಹಕರು ನಿರ್ಮಾಣ ಅವಧಿಯುದ್ದಕ್ಕೂ ಕಂತಿನ ಮೂಲಕ ಮೊತ್ತವನ್ನು ಪಾವತಿಸಬಹುದಾಗಿದೆ,” ಎಂದು ಅವರು ವಿವರಿಸಿದರು.

ಈಗಿನ ಮಿತ ದರಗಳನ್ನು ಪರಿಗಣಿಸಿದಾಗ ಮನೆ ಖರೀದಿಸಲು ಅಥವಾ ವಾಣಿಜ್ಯ ಸ್ಥಳ ಖರೀದಿಸಲು ಬಯಸುವವರಿಗೆ ಈಗಿನ ಸಮಯಕ್ಕಿಂತ ಹೆಚ್ಚಿನ ಅನುಕೂಲಕರ ಸಮಯ ಮತ್ತೊಂದಿಲ್ಲ. ಈ ಸಾಂಕ್ರಾಮಿಕ ಅಂತ್ಯಗೊಂಡು ಆರ್ಥಿಕತೆ ಮತ್ತೆ ಪುಟಿದೇಳುವಾಗ ಮತ್ತೆ ಆಸ್ತಿ ದರಗಳು ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಆದುದರಿಂದ ಜಾಣ ಖದೀರಿದಾರರು ಈಗಲೇ ತಮ್ಮ ನಿರ್ಧಾರಗಳನ್ನು ಅಂತಿಮಗೊಳಿಸಿ ಹೂಡಿಕೆ ಮಾಡಿ ರಿಯಾಯಿತಿ ದರದಲ್ಲಿ ಮನೆ ಅಥವಾ ವಾಣಿಜ್ಯ ಸ್ಥಳಗಳನ್ನು ತಮ್ಮದಾಗಿಸಿಕೊಳ್ಳಬಹುದು.
ಈ ಪ್ರಾಪರ್ಟಿ ಮೇಳ ಇನ್ನೂ ಹತ್ತು ದಿನ ಮುಂದುವರಿಯಲಿದ್ದು ಈಗಾಗಲೇ ಹಲವು ಮಂದಿ ಖರೀದಿಸಲು ಮುಂದೆ ಬಂದಿದ್ದಾರೆ ಹಾಗೂ ಹಲವು ಯೋಜನೆಗಳು ಅತಿ ಶೀಘ್ರದಲ್ಲಿಯೇ ಸೋಲ್ಡ್ ಔಟ್ ಆಗುತ್ತಿವೆ.

ಪ್ರಾಪರ್ಟಿ ಮೇಳ ನಡೆಯುವ ಸ್ಥಳ 3ನೇ ಅಂತಸ್ತು, ಇನ್‍ಲ್ಯಾಂಡ್ ಆರ್ನೇಟ್, ನವಭಾರತ್ ವೃತ್ತ, ಮಂಗಳೂರು, ಫೆಬ್ರವರಿ 8ರಿಂದ ಫೆಬ್ರವರಿ 28ರ ವರೆಗೆ ಪ್ರಾಪರ್ಟಿ ಮೇಳ ಆಯೋಜನೆ. ಸಮಯ : ಬೆಳಿಗ್ಗೆ 9.30ರಿಂದ ಸಂಜೆ 7.30. ದೂರವಾಣಿ : 9972089099, 9972014055

ಇಮೇಲ್ :[email protected]

 ವೆಬ್‍ಸೈಟ್ : www.inlandbuilders.net ಸಂಪರ್ಕಿಸಬಹುದು.

Related posts

Leave a Reply

Your email address will not be published. Required fields are marked *