Header Ads
Header Ads
Breaking News

ಇಬ್ಬರ ನಡುವಿನ ಗಲಾಟೆ ಚೂರಿಯಿಂದ ಇರಿಯುವ ಮೂಲಕ ಅಂತ್ಯ ಕೊಣಾಜೆಯ ನಾಟೆಕಲ್ ಎಂಬಲ್ಲಿ ನಡೆದ ಘಟನೆ ಗಾಯಾಳುಗಳಿಬ್ಬರು ಆಸ್ಪತ್ರೆಗೆ ದಾಖಲು

ಇಬ್ಬರ ನಡುವಿನ ಗಲಾಟೆ ಚೂರಿಯಿಂದ ಇರಿಯುವ ಮೂಲಕ ಅಂತ್ಯ ಕಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದೆ.ಕಿನ್ಯಾ ಹಿದಾಯತ್ ನಗರ ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ಅಬೂಬಕರ್ ಸಿದ್ದೀಖ್ ಚೂರಿಯಿಂದ ಇರಿತಕ್ಕೆ ಒಳಗಾದವರು. ನಾಟೆಕಲ್ ನಿವಾಸಿ ಅಜ್ಮಾಲ್ ಎಂಬಾತ ಚೂರಿಯಿಂದ ಇರಿದವ ಬಸ್ ಚಾಲಕನಾಗಿರುವ ಅಜ್ಮಲ್, ಹಲ್ಲೆಗೊಳಗಾದ ಖಲೀಲ್ ಸ್ನೇಹಿತನ ಪುತ್ರನಿಗೆ ಕಿರುಕುಳ ನೀಡಿದ್ದ ಎನ್ನಲಾಗಿದೆ.

 ಶಾಲೆಗೆ ತೆರಳುವ ೧೪ರ ಬಾಲಕ ತಾನು ಕರೆದಾಗ ತನ್ನ ಬಳಿ ಬಂದಿಲ್ಲವೆಂದು ಬಾಲಕನಿಗೆ ಹಲ್ಲೆ ನಡೆಸಿದ್ದ. ಇದನ್ನು ಬಾಲಕ ಮನೆಯ ಹೆತ್ತವರಲ್ಲಿ ತಿಳಿಸಿದ್ದನು. ಇದನ್ನು ಬಾಲಕನ ತಂದೆಯ ಸ್ನೇಹಿತ ಖಲೀಲ್ ಪ್ರಶ್ನಿಸಲು ಅಜ್ಮಲ್ ಗೆ ಫೋನಾಯಿಸಿದ್ದ. ಇಬ್ಬರ ನಡುವೆ ವಾಗ್ವಾದ ನಡೆದು ತಾಕತ್ತಿದ್ದರೆ ಎದುರಿಗೆ ಬಂದು ಮಾತನಾಡಲು ಅಜ್ಮಲ್ ಹೇಳಿದ್ದಾನೆ. ಅದರಂತೆ ನಾಟೆಕಲ್ ನಲ್ಲಿ ಎದುರಾದಾಗ ಮತ್ತೆ ವಾಗ್ವಾದ ನಡೆದು ಖಲೀಲ್ ಮರದ ರೀಪಿನಿಂದ ಅಜ್ಮಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಅಜ್ಮಲ್ ಚೂರಿಯಿಂದ ಖಲೀಲ್ ಸೊಂಟದ ಭಾಗಕ್ಕೆ ಚುಚ್ಚಿದ್ದಾನೆ.
ವರದಿ: ಆರೀಫ್ ಉಳ್ಳಾಲ