Header Ads
Breaking News

ಇರುವೈಲು ದೇವಸ್ಥಾನದಲ್ಲಿ ವಿವಾದ ಅಷ್ಟಮಂಗಲ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಕೈಗೊಳ್ಳಲಿ : ದೊಡ್ಡಗುತ್ತು ಪದ್ಮನಾಭ ಶೆಟ್ಟಿ ಆಗ್ರಹ

ಮೂಡುಬಿದಿರೆ: ಬರ್ಖಾಸ್ತುಗೊಂಡಿರುವ ಇರುವೈಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ನವೀನ್ ಶೆಟ್ಟಿ ಅವರನ್ನು ಹೊಸಮರಾಯ ದೈವದ ಪಾತ್ರಿಯಾಗಿ ಮರುನೇಮಕಗೊಳಿಸಿದ್ದೆ ದೇವಸ್ಥಾನದಲ್ಲಿ ವಿವಾದ ಏರ್ಪಡಲು ಕಾರಣವಾಗಿದ್ದು ಆದ್ದರಿಂದ ಪಾತ್ರಿ ಬಗ್ಗೆ ಯಾವುದೇ ತೀರ್ಮಾನ ತೆಗದುಕೊಳ್ಳಲು ಶಾಸಕರು, ಆಡಳಿತಾಧಿಕಾರಿ, ಗುತ್ತು ಬರ್ಕೆಯವರು ಮತ್ತು ಊರವರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಅಷ್ಟಮಂಗಳ ಪ್ರಶ್ನೆಯಿಟ್ಟು ಅದರ ಪ್ರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೊಡ್ಡಗುತ್ತು ಪದ್ಮನಾಭ ಶೆಟ್ಟಿ ಅವರು ಆಗ್ರಹಿಸಿದ್ದಾರೆ.

ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ದೈವದ ಪಾತ್ರಿ ನೇಮಕದ ಬಗ್ಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿ ಅವರು ಮೂಡುಬಿದರೆ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳೆದ ವರ್ಷ ವಿಷಯವೊಂದಕ್ಕೆ ಸಂಬಂಧಿಸಿ ಅಸಮಧಾನಗೊಂಡಿದ್ದ ದೈವದ ಪಾತ್ರಿ ನವೀನ್ ಶೆಟ್ಟಿ ಇನ್ನು ಮುಂದೆ ದೈವದ ಪಾತ್ರಿಯಾಗಿ ದರ್ಶನಕ್ಕೆ ನಿಲ್ಲುವುದಿಲ್ಲ ಎಂದು ದೇವರ ತೀರ್ಥ ಮಂಟಪದ ಎದುರು ನೆಲಕ್ಕೆ ಕೈ ಬಡಿದು ಹೋಗಿದ್ದರು. ಈ ವರ್ಷದ ಜಾತ್ರೆಗೆ ಅವರನ್ನು ದೇವರ ಬಲಿಗೆ ನಿಲ್ಲಿಸುವುದಿಲ್ಲ ಎಂದು ಹಿಂದಿನ ಸಮಿತಿಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದರು ಈ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿ ಹಿಂದಿನ ವ್ಯವಸ್ಥಾಪನಾ ಸಮಿತಿಯವರಿಗೆ ನೋಟಿಸ್ ಕೂಡ ನೀಡಿದ್ದರು. ಆದರೆ ಈ ವರ್ಷ ಗುತ್ತು ಬರ್ಕೆಯವರನ್ನು ವಿಶ್ವಾಸಕ್ಕೆ ಪಡೆಯದೆ, ಆಡಳಿತಾಧಿಕಾರಿಯ ಆದೇಶಕ್ಕು ಮನ್ನಣೆ ನೀಡದೆ, ದೇವಸ್ಥಾನದ ರೀತಿ, ನೀತಿಗಳನ್ನು ಉಲ್ಲಂಘಿಸಿ ಅದೇ ದೈವದ ಪಾತ್ರಿಯನ್ನು ಈ ವರ್ಷ ಮರುನೇಮಕ ಮಾಡಲಾಗಿದೆ.ಈಗಾಗಲೇ ಇರುವೈಲು ದೇವಸ್ಥಾನದ ಜಾತ್ರೆ ವೇಳೆ ವಿವಾದಕ್ಕೆ ಕಾರಣವಾಗಿತ್ತು ಎಂದು ಪೊಲೀಸರ ಮತ್ತು ಆಡಳಿತಾಧಿಕಾರಿಯವರ ಸೂಚನೆಯನ್ನು ನಿರ್ಲಕ್ಷಿಸಿ ದೈವದ ಪಾತ್ರಿಯನ್ನು ದರ್ಶನಕ್ಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ಇರುವೈಲು ದೇವಸ್ಥಾನದ ಯಕ್ಷಗಾನ ಮಂಡಳಿಯನ್ನು ಖಾಸಗಿಯವರಿಗೆ ವಹಿಸಿಕೊಟ್ಟು ನಷ್ಟ ಸಂಭವಿಸಿದ ನಂತರ ಹಲವು ವರ್ಷಗಳಿಂದ ಬಯಲಾಟವನ್ನೆ ನಿಲ್ಲಿಸಲಾಗಿದೆ ಎಂದವರು ದೈವದ ಪಾತ್ರಿಗೆ ಆವೇಶ ಬಂದಿರುವುದು ನೈಜವಾದುದಲ್ಲ ಎಂದು ಐ.ಕುಮಾರ್ ಶೆಟ್ಟಿ ಹೇಳಿದರು.  ಸುದ್ದಿಗೋಷ್ಟಿಯಲ್ಲಿ ರುಕ್ಕಯ್ಯ ಪೂಜಾರಿ, ನಾರಾಯಣ ಪೂಜಾರಿ, ಸುನೀಲ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *