Header Ads
Breaking News

ಇರುವೈಲು ದೇವಸ್ಥಾನ ಪಾತ್ರಿ ವಿವಾದ; ಭಕ್ತರ ಗುಂಪೊಂದರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮೂಡುಬಿದಿರೆ ಸಮೀಪದ ಇರುವೈಲು ದೇವಸ್ಥಾನದಲ್ಲಿ ದೈವ ಪಾತ್ರಿಗೆ ಸಂಬಂಧಿಸಿದಂತೆ ಶನಿವಾರ ಎರಡು ತಂಡಗಳ ನಡುವೆ ಮಾರಮಾರಿ ನಡೆದಿದೆ. ಇರುವೈಲು ದೇವಸ್ಥಾನದಲ್ಲಿ ಇತ್ತೀಚೆಗೆ ನಡುವೆ ನಡೆಯುತ್ತಿರುವ ಗೊಂದಲಗಳಿಂದ ಅಸಮಾಧಾನಗೊಂಡ ಇರುವೈಲು ಭಕ್ತರ ಗೊಂಪೊಂದು ಭಾನುವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ದೇವಸ್ಥಾನದ ಆರಾಧನೆಗಳು ಇನ್ನು ಮುಂದೆ ಸುಸೂತ್ರವಾಗಿ ನಡೆಯುವಂತೆ ಕಾನೂನು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ದುರ್ಗಾಪರಮೇಶ್ವರಿ ದೇವಸ್ಥಾನದ ದೈವದ ಕೋಲ ನಡೆಯುತ್ತಿರುವಾಗಲೇ ತಂಡವೊಂದು ಅಲ್ಲಿದ್ದ ಕೆಲವರಿಗೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅದೇ ತಂಡ ವಾಹನ ಅಟ್ಟಗಟ್ಟಿ ಮತ್ತೊಮ್ಮೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಪಣಂಬೂರು ಉಪವಿಭಾಗದ ಎಸಿಪಿ ಕೆ.ಯು ಬೆಳ್ಳಿಯಪ್ಪ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಸಮಾಲೋಚನೆ ನಡೆಸಿದರು. ಧರಣಿ ನಿರತರ ಪರವಾಗಿ ಪ್ರಸಾದ್ ಶೆಟ್ಟಿ ಎಸಿಪಿ ಅವರಿಗೆ ಘಟನೆಯ ಮಾಹಿತಿ ನೀಡಿದರು. ಇರುವೈಲು ದೇವಸ್ಥಾನದ ದೈವದ ಪಾತ್ರಿ ವಿಚಾರದಲ್ಲಿ ತಂಡವೊಂದು ಹಲವು ಸಮಯಗಳಿಂದ ವಿರೋಧಿಸುತ್ತಾ ಬಂದಿದೆ.

ಶನಿವಾರ ಹೊಸಮರಾಯ ದೈವದ ಕೋಲ ಆರಂಭವಾಗುವ ಹೊತ್ತಿಗೆ ತಂಡವೊಂದು ದೈವದ ಪಾತ್ರಿಯನ್ನು ನಿಂದಿಸಿದರಿಂದ ವಿವಾದ ಉಂಟಾಗಿತ್ತು. ಇದನ್ನು ಆಕ್ಷೇಪಿಸಿದವರಿಗೆ ತಂಡ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದವರನ್ನು ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಅದೇ ತಂಡ ಮಾಸ್ತಿಕಟ್ಟೆಯಲ್ಲಿ ವಾಹನ ತಡೆದು ಮತ್ತೊಮ್ಮೆ ಹಲ್ಲೆ ನಡೆಸಿದೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ರಾಜಕೀಯ ಒತ್ತಡ ಪೊಲೀಸರ ಹಸ್ತಕ್ಷೇಪದಿಂದ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ತೊಂದರೆ ಆಗಿದೆ ಎಂದು ಧರಣಿ ನಿರತರು ಆರೋಪಿಸಿದರು.

ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೈವದ ಪಾತ್ರಿ ವಿವಾದ ಧಾರ್ಮಿಕ ವಿಷಯವಾಗಿರುವುದರಿಂದ ಊರವರ ಜತೆ ಮಾತುಕತೆ ನಡೆಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಎಸಿಪಿ ಧರಣಿ ನಿರತರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡಕೊಳ್ಳಲಾಯಿತು. ಇರುವೈಲು ದೇವಸ್ಥಾನ ತದನಂತರ ಮಾಸ್ತಿಕಟ್ಟೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಎರಡೂ ಕಡೆಯ ತಲಾ 8ಮಂದಿ ವಿರುದ್ಧ ದೂರು ದಾಖಲಾಗಿದೆ.

Related posts

Leave a Reply

Your email address will not be published. Required fields are marked *