Header Ads
Header Ads
Breaking News

ಇರ್ದೆಯ ಜೋಪಡಿ ವಾಸದ ವಿಧವೆ, ಸೂರು ಒದಗಿಸುವುದಾಗಿ ಉದ್ಯಮಿ ಅಶೋಕ್ ರೈ ಭರವಸೆ

ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇರ್ದೆ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿನ ಸರ್ಕಾರಿ ಗೋಮಾಳ ಜಾಗದಲ್ಲಿ ವಿಧವೆ ಮಹಿಳೆ ಪುಷ್ಪಲತಾ ಎಂಬವರು ವಾಸ್ತವ್ಯವಿರುವ ಪ್ಲಾಸ್ಟಿಕ್ ಹೊದಿಕೆಯ ಜೋಪಡಿಗೆ ಉದ್ಯಮಿ ಅಶೋಕ್‌ಕುಮಾರ್ ರೈ ಅವರು ಶನಿವಾರ ಭೇಟಿ ನೀಡಿ ಆ ಕುಟುಂಬಕ್ಕೆ ಸೂರು ಒದಗಿಸುವ ಭರವಸೆ ನೀಡಿದರು.
ಪುಷ್ಪಲತಾ ಅವರು, ಪ್ಲಾಸ್ಟಿಕ್ ಅಳವಡಿಕೆಯ ಜೋಪಡಿಯೊಂದನ್ನು ನಿರ್ಮಿಸಿಕೊಂಡು ತನ್ನಿಬ್ಬರು ಎಳೆಯ ಮಕ್ಕಳ ಜೊತೆ ಜೀವನ ಸಾಗಿಸುತ್ತಿರುವ ಬಡ ವಿಧವೆ ಮಹಿಳೆಯೊಬ್ಬರ ಕುಟುಂಬಕ್ಕೆ ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೆಂದ್ರದ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಸೂರು ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ. ಇನ್ನು ಪುಷ್ಪತಾ ಅವರಿಗೆ ಇಬ್ಬರು ಮಕ್ಕಳಿದ್ದು, ಪ್ರಥಮ ಪುತ್ರ ಅಭಿಲಾಷ್ ೫ನೇ ತರಗತಿಯಲ್ಲಿ ಮತ್ತು ದ್ವಿತೀಯ ಪುತ್ರ ಅವಿನಾಶ್ ೩ನೇ ತರಗತಿಯಲ್ಲಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

Related posts

Leave a Reply