Header Ads
Header Ads
Breaking News

ಡಿ.2ರಂದು ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ದಶಮಾನೋತ್ಸವ ಸಂಭ್ರಮ

ಪುತ್ತೂರು : ದಶಮಾನೋತ್ಸವ ಸಂಭ್ರಮದಲ್ಲಿರುವ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ದಶ ಸಂಭ್ರಮ-2018 ಕಾರ್ಯಕ್ರಮ ಡಿ.29 ಶನಿವಾರ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ್ ರೈ ಕೈಕಾರ ತಿಳಿಸಿದ್ದಾರೆ.
ಸತತ ಮೂರು ಬಾರಿ ಶೇ.100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಶಾಲೆಯು ಪಾತ್ರವಾಗಿದೆ. ದಶ ಸಂಭ್ರಮದ ಪ್ರಯುಕ್ತ ಶಾಲಾ ಪ್ರಾರಂಭೋತ್ಸವ, ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ, ದಶ ಸಿಹಿ ಯೋಜನೆ, ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಮುಂತಾದ ಒಂಭತ್ತು ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದ್ದು, ದಶ ಕಾರ್ಯಕ್ರಮವಾಗಿ ದಶ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದಶ ಸಂಭ್ರಮಾಚರಣೆ ನೆನಪಿಗಾಗಿ ಸ್ಮಾರ್ಟ್ ಕ್ಲಾಸ್ ಯೋಜನೆ, ಕ್ರೀಡಾ ಕೊಠಡಿ ನಿರ್ಮಾಣ, ಶಾಲಾ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ, ಶಾಲಾ ಕ್ರೀಡಾಂಗಣ ಅಗಲೀಕರಣ ಹಾಗೂ ಅಧ್ಯಾಪಕರ ಕೊಠಡಿಗೆ ಮೇಲ್ಛಾವಣಿ ಹಾಕುವುದು ಹೀಗೆ ಪಂಚ ಶಾಶ್ವತ ಯೋಜನೆಗಳನ್ನು ನಿರ್ಮಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣ ಹಂತದಲ್ಲಿದೆ ಎಂದು ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಉದ್ಯಮಿ ಮಹಮ್ಮದ್ ನವಾಝ್ ಧ್ವಜಾರೋಹಣ ಮಾಡಲಿದ್ದು, ಬಿಆರ್‌ಸಿ ಸಂಯೋಜಕ ಮೋನಪ್ಪ ಪೂಜಾರಿ, ದೇವಪ್ಪ ಗೌಡ ಉಪಸ್ಥಿತರಿರುವರು. ಬಳಿಕ ಶಾಲಾ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಸಂಜೆ 6.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೆರವೇರಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಕೊಠಡಿ ಉದ್ಘಾಟಿಸುವರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ತಾಪಂ ಸದಸ್ಯೆ ಮೀನಾಕ್ಷಿ ಮಂಜುನಾಥ ಸಾಧಕರನ್ನು ಸನ್ಮಾನಿಸುವರು. ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ಬೇಬಿ ಜಯರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ. ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ದಶಮಾನೋತ್ಸವ ಸಮಿತಿ ಕೋಶಾಧಿಕಾರಿ ಮಂಜುನಾಥ ಎನ್.ಎಸ್., ಸಂಚಾಲಕ ಪ್ರಮೋದ್ ರೈ ಕುದ್ಕಲ್ ಉಪಸ್ಥಿತರಿದ್ದರು.

Related posts

Leave a Reply