Header Ads
Header Ads
Breaking News

ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ

ಸರಕಾರದ ಯೋಜನೆಗಳು ಗ್ರಾಮದ ಪ್ರತಿಯೊಬ್ಬ ರೈತರಿಗೆ ಸಿಗಬೇಕು. ಕೃಷಿ ಮಾಹಿತಿಗಳು, ಕೃಷಿ ಉಪಕರಣಗಳು ಮತ್ತು ಯೋಜನೆಗಳ ಮಾಹಿತಿಗಳನ್ನು ಇಲಾಖೆಗಳು ಗ್ರಾಮ ಗ್ರಾಮಗಳಲ್ಲಿ ರೈತರಿಗೆ ನೀಡುವ ಮೂಲಕ ಸರಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಿದರೆ ಮಾತ್ರ ಕೃಷಿ ಇಲಾಖೆಯ ಯೋಜನೆಗಳು ಯಶಸ್ವಿಯಾಗುತ್ತದೆ ಎಂದು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.ಅವರು ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ಇದರ ಆಶ್ರಯದಲ್ಲಿ ನಡೆದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಕೃಷಿ ಕ್ಷೇತ್ರ ಉತ್ತಮವಾಗಿ ಬೆಳವಣಿಗೆ ಕಾಣಬೇಕಾದರೆ ಗ್ರಾಮ ಮಟ್ಟದ ರೈತರಿಗೆ ಹೆಚ್ಚು ಒತ್ತು ನೀಡಬೇಕು. ಸರಕಾರದ ಯೋಜನೆಗಳು ಇಲಾಖೆಗೆ ಸೀಮಿತವಾಗದೇ ಗ್ರಾಮ ಮಟ್ಟದ ರೈತರಿಗೆ ಸಿಗುವಂತೆ ಅಧಿಕಾರಿಗಳು ಚಾಲನಶೀಲರಾಗಬೇಕು. ರೈತರಿಗೆ ಇಲಾಖೆಯಿಂದ ಉತ್ತಮ ಯೋಜನೆಗಳು ದೊರಕಿದಾಗ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಆಶಕ್ತಿಯಲ್ಲಿ ಕೃಷಿಗೆ ಹೆಚ್ಚು ಒತ್ತು ಕೊಡುತ್ತಾರೆ ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿ.ಪಂ ಸದಸ್ಯ ಎಸ್.ಎನ್. ಮನ್ಮಥ ಕೃಷಿಯತ್ತ ಯುವ ಜನಾಂಗವನ್ನು ಆಕರ್ಷಣೆ ಮಾಡಬೇಕಾದರೆ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅವಶ್ಯಕತೆ ಇದೆ. ಇದರಿಂದ ಯುವ ಜನತೆ ನಗರದತ್ತ ವಲಸೆ ಹೋಗುವುದು ತಪ್ಪುತ್ತದೆ. ಗ್ರಾಮೀಣ ಮಟ್ಟದಲ್ಲಿ ಕೃಷಿಗೆ ಕಾರ್ಮಿಕರ ಕೊರತೆ ಉಂಟಾಗುವ ಸಂದರ್ಭ ಕೃಷಿ ಕ್ಷೇತ್ರಕ್ಕೆ ಹೊಸ ಯಂತ್ರಗಳ ಅವಶ್ಯಕತೆ ಇದೆ. ಇದರ ಮೂಲಕ ಕೃಷಿಯ ಅಭಿವೃದ್ದಿ ಗ್ರಾಮೀಣ ಮಟ್ಟದಲ್ಲಿ ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ಜಿ.ಪಂ ಸದಸ್ಯೆ ಪುಷ್ಪಾವತಿ ಬಾಳಿಲ, ರಾಜ್ಯ ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್, ನ.ಪಂ ಸದಸ್ಯ ಗಿರೀಶ್ ಕಲ್ಲುಗದ್ದೆ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ, ಸಹಾಯಕ ಕೃಷಿ ನಿರ್ದೇಶಕ ಕೆ.ಬಿ. ಫಾಲಿಚಂದ್ರ ಉಪಸ್ಥಿತರಿದ್ದರು. ನಾಗರಾಜ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಕೃಷಿ ಅಧಿಕಾರಿ ಮೋಹನ ನಂಗಾರು ವಂದಿಸಿದರು.

Related posts

Leave a Reply