Breaking News

ಇಸ್ರೇಲ್‌ನ ಮುಸ್ಲಿಂ ಷರಿಯತ್ ನ್ಯಾಯಾಲಯ, ಮೊದಲ ಮಹಿಳಾ ನ್ಯಾಯಾಧೀಶೆ ಹನಾ ಖತೀಬ್

ಇಸ್ರೇಲ್ನಲ್ಲಿರುವ ಮುಸಲ್ಮಾನರ ಧಾರ್ಮಿಕ ಷರಿಯತ್ ನ್ಯಾಯಾಲಯದ ಮೊದಲ ನ್ಯಾಯಾಧೀಶೆಯಾಗಿ ಹನಾ ಖತೀಬ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.
ಇದುವರೆಗೆ ಅವರು ತಮ್ರ ನಗರದ ಅಟಾರ್ನಿ ಆಗಿದ್ದರು. ಮುಸಲ್ಮಾನರಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನು ವಿಚಾರಣೆಯೂ ಷರಿಯತ್ ನ್ಯಾಯಾಲಯದಲ್ಲಿ ನಡೆಯುತ್ತದೆ. ನನ್ನ ನೇಮಕಾತಿಯು ದೇಶದ ಕಾನೂನು ವ್ಯವಸ್ಥೆ ಹಾಗೂ ಮಹಿಳೆಯರ ಸಾಧನೆಯಾಗಿದೆ ಎಂದು ಅವರು ವಿವರಿಸಿದರು.
ಇಸ್ರೇಲ್ನ ಅಧ್ಯಕ್ಷ ರೆವೆನ್ ರಿವ್ಲಿನ್ ಅವರು ಮಾತನಾಡಿ, ಹನಾ ನೇಮಕಾತಿ ದೇಶದ ಇತರೆ ನ್ಯಾಯಾಲಯಗಳಿಗೂ ಮಾದರಿಯಾಗಿದ್ದು, ಇದನ್ನು ಅನುಸರಿಸುವಂತೆ ಸಲಹೆ ನೀಡಿದರು. ಹನಾ ನೇಮಕದಿಂದಾಗಿ ಒಂಬತ್ತು ಇಸ್ಲಾಮಿಕ್ ನ್ಯಾಯಾಲಯಗಳಲ್ಲಿರುವ ಒಟ್ಟು ನ್ಯಾಯಾಧೀಶರ ಸಂಖ್ಯೆ 18 ಆಗಿದೆ. ಇಸ್ರೇಲ್ನಲ್ಲಿ ಕೌಟುಂಬಿಕ ಕಾನೂನು ವಿಚ್ಛೇದನ, ವಿವಾಹ ಧಾರ್ಮಿಕ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತದೆ.

Related posts

Leave a Reply