Header Ads
Breaking News

ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ ವತಿಯಿಂದ ಸೇವ್ ವಾಟರ್ ಸೇವ್ ಲೈಫ್ ಜಾಗೃತಿ ಕಾರ್ಯಕ್ರಮ

ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ ಹಾಗೂ ಎಸ್‍ಐಒ ಇದರ ಅಶ್ರಯದಲ್ಲಿ ಸೇವ್ ವಾಟರ್ ಸೇವ್ ಲೈಫ್ ಎಂಬ ಶೀರ್ಷಿಕೆಯಡಿಯಲ್ಲಿ ಎ1 ಬಾಗ್‍ನಿಂದ ಜಾಮಿಯಾ ಮಸೀದಿಯವರೆಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರ್ಯಾಲಿಯನ್ನು ನಡೆಸಲಾಯಿತು. ಈ ರ್ಯಾಲಿಯನ್ನು ಕುದ್ರೋಳಿಯ ಕಾರ್ಪೋರೇಟರ್ ಅಬ್ದುಲ್ ಅಜೀಝ್‍ರವರು ಉದ್ಘಾಟಿಸಿದರು. ಎ1 ಬಾಗ್‍ನಿಂದನಿಂದ ಹೂರಟ ರ್ಯಾಲಿಯು ಜಾಮಿಯಾ ಮಸೀದಿಯ ಸಮೀಪ ಮುಕ್ತ್ತಾಯಗೊಂಡಿತು. ನಂತರ ಜಮಾತೇ ಇಸ್ಲಾಮಿ ಹಿಂದ್ ಕುದ್ರೋಳಿ ವರ್ತುಲದ ಕಾರ್ಯದರ್ಶಿಯವರಾದ ಜಃ ಮಕ್ಬುಲ್ ಅಹ್ಮದ್ ಕುದ್ರೋಳಿರವರು ಮಾತನಾಡಿ ನೀರಿನ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭ ಎಸ್‍ಐಒ ಇದರ ಕಾರ್ಯದರ್ಶಿಯವರಾದ ನಿಹಾಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *