Header Ads
Header Ads
Breaking News

ಇ-ಫಾರ್ಮಸಿ ಜಾರಿ ಮಾಡಲು ಮುಂದಾಗಿರುವುಕ್ಕೆ ವಿರೋಧ:ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್

ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಔಷಧ ಮಳಿಗೆಗಳು ದೇಶಾದ್ಯಂತ ಶುಕ್ರವಾರ ಪ್ರತಿಭಟನೆಗಿಳಿದಿವೆ. ಇದರಿಂದಾಗಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ (ಎಐಒಸಿಡಿ) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಕಳೆದ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿಯ ವರೆಗೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸದಿರಲು ತೀರ್ಮಾನಿಸಿದೆ.

ದೇಶದ್ಯಾಂತ ಒಂದು ದಿನ ಐಒಸಿಡಿ ಕರೆ ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿದೆ. ಇನ್ನು ದೇಶಾದ್ಯಂತ ಸುಮಾರು ೮೫ ಲಕ್ಷ ಮೆಡಿಕಲ್ ಶಾಪ್ ಗಳು ಇವೆ. ಇನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಔಷಧಿ ಮಳಿಗೆ ಹಾಗೂ ಜನರಿಕ್ ಔಷಧಿ ಮಳಿಗೆಗೆ ಸಾರ್ವಜನಿಕರು ತೆರಳುವ ದೃಶ್ಯ ಕಂಡುಬಂತು. ಇನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.

Related posts

Leave a Reply