Header Ads
Header Ads
Breaking News

ಈಜು ಕೊಳದಂತಾದ ಮಂಜೇಶ್ವರ ರೈಲ್ವೆ ನಿಲ್ದಾಣ ರಸ್ತೆ : ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಾಗರಿಕರ ಆಗ್ರಹ

ಮಳೆಗಾಲ ಆರಂಭವಾದ ಬೆನ್ನಲ್ಲೇ ಮಂಜೇಶ್ವರ ರಾಗಂ ಜಂಕ್ಷನ್‌ನಿಂದ ರೈಲ್ವೆ ಸ್ಟೇಶನ್ ಸಾಗುವ ರಸ್ತೆ ಸಂಪೂರ್ಣವಾಗಿ ಕೆಸರು ನೀರು ತುಂಬಿ ಈಜು ಕೊಳದಂತಾಗಿದೆ. ರಸ್ತೆಯಲ್ಲಿ ಸಂಪೂರ್ಣವಾಗಿ ನೀರು ಆವರಿಸಿರುವ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿಕೊಂಡೇ ಸಾಗುವ ದುಸ್ಥಿತಿ ಇಲ್ಲಿಯ ನಾಗರಿಕರಿಗೆ ಬಂದೊದಗಿದೆ.

ಪ್ರತೀ ವರ್ಷವೂ ಇದೆ ರೀತಿಯ ದುರಾವಸ್ಥೆ ಬಂದೊದಗುತ್ತಿದ್ದರೂ ಆಪತ್ತು ಬಂದೊದಗಿದ ಸಂದರ್ಭ ಭೇಟಿ ನೀಡಿ ವಾಗ್ದಾನಗಳನ್ನು ನೀಡುತ್ತಿರುವ ಜನಪ್ರತಿನಿಧಿಗಳು ಬಳಿಕ ನಾಪತ್ತೆಯಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೇ ಇರುವುದೇ ಈ ರೀತಿಯ ನೀರು ಕಟ್ಟಿ ನಿಲ್ಲಲು ಕಾರಣವಾಗಿದೆ. ಮಳೆ ನೀರು ತುಂಬಿ ಇಲ್ಲಿರುವ ಗುಂಡಿಗಳಲ್ಲೆಲ್ಲಾ ಕೆಸರು ನೀರು ತುಂಬಿ ಕಾಲ್ನಡಿಗೆಯಲ್ಲಿ ಸಾಗಲು ಕೂಡಾ ಅಸಾಧ್ಯವಾಗಿದೆ. ರೈಲ್ವೆ ಪ್ರಯಾಣಿಕರು ಮಾತ್ರವಲ್ಲದೆ ಬಹುತೇಕ ಮಂದಿ ಒಳ ಪೇಟೆಗೆ ತೆರಳಲು ಇದೆ ರಸ್ತೆಯನ್ನೇ ಅವಲಂಭಿಸಬೇಕಾಗಿದೆ.

ಈ ರಸ್ತೆಯ ಇಬ್ಬಾಗಗಲ್ಲೂ ಕಾಡು ಆವರಿಸಿದೆ. ಇದನ್ನೆಲ್ಲಾ ಕಡಿದು ಸೂಕ್ತವಾದ ನೀರು ಹರಿದು ಹೋಗುವಂಥ ವ್ಯವಸ್ಥೆಯನ್ನು ಕಲ್ಪಿಸಿದರೆ ಇದ್ಕಕೊಂದು ಪರಿಹಾರವನ್ನು ಕಂಡುಕೊಳ್ಳಬಹುದಾಗಿ ಊರವರು ಆಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇದ್ಕಕೊಂದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *