Header Ads
Header Ads
Header Ads
Breaking News

ಈಜು ಕೊಳವಾದ ಬಿ‌ಎಸ್ ನಗರ ರಸ್ತೆ

 

ಮಂಜೇಶ್ವರ ಗ್ರಾಮ ಪಂಚಾಯತ್‌ನ 21 ನೇ ವಾರ್ಡಿನಲ್ಲಿ ರಸ್ತೆಗಳು ನೀರು ತುಂಬಿಕೊಂಡು ಈಜು ಕೊಳದಂತಾಗಿದ್ದರೂ ಸಂಬಂಧಪಟ್ಟವರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಗ್ರಾಮ ಸದಸ್ಯರಲ್ಲಿ ದೂರನ್ನು ನೀಡಿದರೂ ಅವರೂ ಕೂಡಾ ಈ ಬಗ್ಗೆ ಯಾವುದೇ ಮುತುವರ್ಜಿ ವಹಿಸಿಲ್ಲ. ಸಣ್ಣ ಒಂದು ಮಳೆ ಬಂದರೂ ಈಜು ಕೊಳವಾಗುತ್ತಿರುವ ಈ ರಸ್ತೆಯಲ್ಲಿ ದಿನಂಪ್ರತಿ ಎಳೆ ಪ್ರಾಯದ ವಿದ್ಯಾರ್ಥಿಗಳ ಸಹಿತ ನೂರಾರು ಕಾಲ್ನನಡಿಗೆ ಯಾತ್ರಿಕರು ಹಾಗೂ ಹಲವಾರು ವಾಹನಗಳು ಸಂಚರಿಸುತ್ತಿದೆ. ವಯಸ್ಸಾದವರು ಈ ರಸ್ತೆಯನ್ನು ದಾಟಲು ಹರ ಸಾಹಸ ಪಡುತಿದ್ದಾರೆ.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply