Header Ads
Breaking News

ಈ ಬಾರಿ ಮಂಗಳೂರು ದಸರಾ ಆಚರಣೆ ಮಾತ್ರ- ಮೆರವಣಿಗೆ ಇಲ್ಲ

 ನಾಗರಪಂಚಮಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿಯ ಸಂಭ್ರಮಕ್ಕೆ ತಣ್ಣೀರು ಎರಚಿದ ಕೊರೊನಾ ಕರಿಛಾಯೆ ಇದೀಗ ದಸರಾ ಸಂಭ್ರಮವನ್ನೂ ಕಳೆಗುಂದಿಸುತ್ತಿದೆ. ಕೊರೊನಾ ಕರಿಛಾಯೆಯ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮಂಗಳೂರು ದಸರಾ ಕೂಡ ಸರಳವಾಗಿ ಆಚರಿಸಲ್ಪಡಲಿದೆ. ಮಂಗಳೂರು ದಸರಾ ಮಹೋತ್ಸವ ವಿಶ್ವವಿಖ್ಯಾತವಾಗಿದ್ದು, ಇದನ್ನು ಕೊರೊನಾ ಕಾರಣದಿಂದ ನಿಲ್ಲಿಸುವ ಬದಲು, ಸಂಪ್ರದಾಯ ಪ್ರಕಾರವಾಗಿ ನಡೆಸಲೇಬೇಕು ಎಂಬ ಆಗ್ರಹ ಭಕ್ತರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು “ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದೊಂದಿಗೆ ಆಚರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ನಿರ್ಧರಿಸಿದೆ. ಅದರಂತೆ ಈ ಬಾರಿ ಮಂಗಳೂರು ದಸರಾ ಮೆರವಣಿಗೆ ಇರುವುದಿಲ್ಲ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಈ ಹಿಂದಿನಂತೆ ವೈಭವದಿಂದ ನಡೆಸಲು ಸಾಧ್ಯವಿಲ್ಲ. ಆದರೆ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಉತ್ಸವ ಆಚರಣೆ ನಡೆಯಲಿದೆ. ಮಂಗಳೂರು ದಸರಾ ಸಂದರ್ಭ ಪೂಜೆ, ಪುನಸ್ಕಾರ, ಪ್ರಸಾದ ವಿತರಣೆ, ಮಕ್ಕಳು, ಹಿರಿಯರ ಸುರಕ್ಷೆ ಸೇರಿದಂತೆ ಪ್ರತಿಯೊಂದು ವಿಚಾರ ಗಮನದಲ್ಲಿಟ್ಟು ಕ್ಷೇತ್ರದ ಆಡಳಿತ ಮಂಡಳಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಕ್ಷೇತ್ರದ ದರ್ಶನದಂತೆ ಮಂಗಳೂರು ದಸರಾ ನಡೆಯಲಿದೆ. ಆದರೆ ಈ ಬಾರಿ ದಸರಾ ಮೆರವಣಿಗೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಆಡಳಿತ ಮಂಡಳಿ ನೀಡಿದೆ.

Related posts

Leave a Reply

Your email address will not be published. Required fields are marked *