Header Ads
Header Ads
Breaking News

ಉಚಿತ ವಾಲಿಬಾಲ್ ಕ್ರೀಡಾ ತರಬೇತಿ ಸಮಾರೋಪ ಮೇ 19ರಂದು ಪುತ್ತೂರಿನಲ್ಲಿ ಆಯೋಜನೆ

ಪುತ್ತೂರು; ಕಳೆದ ಎಪ್ರಿಲ್ 11 ರಿಂದ ಪುತ್ತೂರು ದರ್ಭೆಯ ಲಿಟ್ಲ್ ಫ್ಲವರ್ ಶಾಲೆಯಲ್ಲಿ ನಡೆಯುತ್ತಿರುವ ಉಚಿತ ವಾಲಿಬಾಲ್ ಕ್ರೀಡಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಮೇ 19ರಂದು ಸಂಜೆ 4 ಗಂಟೆಗೆ ದರ್ಭೆ ಲಿಟ್ಲ್ ಫ್ಲವರ್ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ತಿಳಿಸಿದರು.ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 40 ದಿನಗಳ ಈ ಉಚಿತ ವಾಲಿಬಾಲ್ ಕ್ರೀಡಾ ತರಬೇತಿ ಕಾರ್ಯಾಗಾರದಲ್ಲಿ 22 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 64 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಲಿಬಾಲ್ ಕ್ರೀಡೆಯನ್ನು ಹೆಚ್ಚು ಜನಪ್ರೀಯಗೊಳಿಸುವ ಹಿನ್ನಲೆಯಲ್ಲಿ ಪ್ರತಿ ವರ್ಷವೂಈ ಬೇಸಿಗೆ ವಾಲಿಬಾಲ್ ಕ್ರೀಡಾ ತರಬೇತಿಯನ್ನು ಆಯೋಜಿಸಲಾಗುತ್ತಿದೆ ಎಂದವರು ತಿಳಿಸಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪಿ.ವಿ. ಕೃಷ್ಣನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರಸಭಾ ಸದಸ್ಯರಾದ ಮಹಮ್ಮದ್ ಆಲಿ, ರಾಜೇಶ್ ಬನ್ನೂರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಬಾಗವಹಿಸಲಿದ್ದಾರೆ ಎಂದರು.ಸುದ್ದಿ ಗೋಷ್ಟಿಯಲ್ಲಿ ಎನ್.ಐ.ಎಸ್ ಕೋಚ್ ಪಿ.ವಿ.ನಾರಾಯಣನ್, ಅಂತರಾಷ್ಟ್ರೀಯ ತರಬೇತುದಾರ ಪಿ.ವಿ.ಕೃಷ್ಣನ್ ಹಾಗೂ ಸಂಘಟನಾ ಕಾರ್ಯದರ್ಶಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

Related posts

Leave a Reply