Header Ads
Breaking News

ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಉಳ್ಳಾಲ: ಸೋಮೇಶ್ವರ ಗ್ರಾಮದ ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳು ಕುಡಿಯುವ ನೀರು, ಕಡಲ್ಕೊರೆತ ತಡೆಗೋಡೆ ಸಮಸ್ಯೆಯನ್ನು ಎದುರಿಟ್ಟು ಚುನಾವಣಾ ಬಹಿಷ್ಕಾರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸ್ಥಳೀಯ ನಿವಾಸಿ ಸಂಶುದ್ದೀನ್ ಉಚ್ಚಿಲ ಮಾತನಾಡಿ ಸೋಮೇಶ್ವರ ಗ್ರಾಮದ ಕಾಟುಂಗರಗುಡ್ಡೆಯಲ್ಲಿ ಸುಮಾರು 30 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಕಡಲ್ಕೊರೆತ ಹೆಚ್ಚಿರುವ ಪ್ರದೇಶದಲ್ಲಿ ಶಾಶ್ವತ ತಡೆಗೋಡೆಯೂ ಮರೀಚಿಕೆಯಾಗಿದೆ. ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಆಶ್ವಾಸನೆ ಮಾತ್ರ ಈವರೆಗೆ ದೊರೆತಿದೆ. ಈವರೆಗೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಇದೀಗ ಮತಯಾಚನೆಗೆ ಬರುವವರು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆಯನ್ನು ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳು ಖಂಡಿತವಾಗಿ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭ ಸ್ಥಳಿಯರಾದ ಮಿಸ್ರಿಯಾ, ದೇವಕಿ, ತಾಹಿರಾ, ಅಬ್ದುಲ್ ಖಾದರ್, ಟಿ.ಕೆ ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *