Header Ads
Header Ads
Breaking News

ಉಚ್ಚಿಲ ಪೇಟೆಭಾಗದಲ್ಲಿನ ಅಪಾಯಕಾರಿ ಕಟ್ಟಡ ತೆರವಿಗೆ ಇಲಾಖೆ ಮೀನಾಮೇಷ: ಜನ ಹೋರಾಟಕ್ಕೆ ಸಿದ್ಧತೆ

ಉಚ್ಚಿಲ ಪೇಟೆ ಭಾಗದ ಹೆದ್ದಾರಿಗೆ ಅಂಟಿಕೊಂಡೇ ಅಕ್ರಮವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿಗಳಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಮೌನ ವಹಿಸಿದ್ದರ ವಿರುದ್ಧ ಉಚ್ಚಿಲ ಗ್ರಾಮಸ್ಥರಾದ ನಾವು ಒಂದಾಗಿ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂಬುದಾಗಿ ಉಚ್ಚಿಲ ಗ್ರಾಮಸ್ಥ ವಿಜಯ ಸಾಲ್ಯಾನ್ ಎಚ್ಚರಿಸಿದ್ದಾರೆ.ಮಾದ್ಯಮದೊಂದಿಗೆ ಮಾತನಾಡಿದ ಅವರು, ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇಟೆ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಸಂದರ್ಭ, 40 ಮೀಟರ್ ಅಂತರದಲ್ಲಿದ್ದ ಕಟ್ಟಡ ಸಹಿತ ಸ್ಥಳವನ್ನು ಹೆದ್ದಾರಿ ಇಲಾಖೆ ವಶಕ್ಕೆ ಪಡೆದು ಕೊಂಡು ಕಟ್ಟಡ ಯಾ ಸ್ಥಳದ ಹಣವನ್ನು ಮಾಲಿಕರು ಪಡೆದುಕೊಂಡಿದ್ದರೂ ಆ ಕಟ್ಟಡಗಳನ್ನು ತೆರವುಗೊಳಿಸದೆ ಇರುವುದರಿಂದ, ಹೆದ್ದಾರಿ ಇಕ್ಕೆಲಲ್ಲಿರುವ ಅಂಗಡಿ ಕೋಣೆಗಳಲ್ಲಿ ಅನದಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಆ ಪ್ರದೇಶ ಅಪಾಯಕಾರಿಯಾಗಿ ರೂಪುಗೊಂಡಿದೆ, ಈ ಈ ಬಗ್ಗೆ ಸಾರ್ವಜನಿಕರ ಸಹಿ ಸಂಗ್ರಹಿಸಿ ಹೆದ್ದಾರಿ ಇಲಾಖೆ ಸಹಿತ ಕಂದಾಯ ಇಲಾಖೆಗೂ ಲಿಖಿತ ದೂರು ನೀಡಿದ್ದರೂ ಈ ವರಗೆ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ, ಒಂದು ಅಂಗಡಿ ಕೋಣೆಯಂತ್ತೂ ಹೆದ್ದಾರಿಗೆ ಅಂಟಿಕೊಂಡೇ ಕಾರ್ಯಚರಿಸುತ್ತಿದ್ದರೆ, ಮತ್ತೊಂದು ಕಟ್ಟಡದ ಮಾಲಿಕರು ಹೆದ್ದಾರಿ ವಶದಲ್ಲಿರುವ ಅಂಗಡಿಕೋಣೆಗಳಿಂದ ಈಗಲೂ ಬಾಡಿಗೆ ವಸೂಲಿ ನಡೆಸುತ್ತಿದ್ದಾರೆ. ಅದಲ್ಲದೆ ಆ ಕಟ್ಟಡದ ಸಮೀಪದಲ್ಲೇ ಮತ್ತೊಂದು ಅಂಗಡಿಕೋಣೆ ನಿರ್ಮಿಸಿದ ರಾಜಕೀಯ ವ್ಯಕ್ತಿಯೋರ್ವರು ಅದರಲ್ಲೂ ಬಾಡಿಗೆ ಪಡೆಯುತ್ತಿದ್ದಾರೆ. ಅಚ್ಚರಿ ಎಂದರೆ ಹಳೆಯ ಮನೆಯ ಪರಿಹಾರ ಹಣ ಪಡೆದುಕೊಂಡ ಕುಟುಂಬವೊಂದು, ಆ ಹಣದಿಂದ ಅದರ ಹಿಂಭಾಗದಲ್ಲಿ ಹಳೆಯ ಮನೆಯ ಡೋರ್ ನಂಬರ್ ಬಳಸಿ ಹೊಸ ಮನೆ ಕಟ್ಟಿಕೊಂಡಿದ್ದು, ಇದೀಗ ವರ್ಷ ಒಂದು ಕಳೆದರೂ ಆ ಹಳೆಯ ದ ಸಮಸ್ಯೆ ಜೀವಂತವಾಗಿದೆ ಎಂದು ಆರೋಪಿಸಿದ್ದಾರೆ.ಸಾಮಾನ್ಯ ಸಭೆಯಲ್ಲಿ ನಿರ್ಣಯ: ಈ ಬಗ್ಗೆ ಹೋರಾಟಗಾರ ಪ್ರಮುಖರು ಉಚ್ಚಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದಾಗ, ಮುಂದಿನ ಸಾಮಾನ್ಯ ಸಭೆ ಇದೇ ತಿಂಗಳ 28ಕ್ಕೆ ನಡೆಯಲಿದೆ, ಇದರ ಬಗ್ಗೆ ಆಡಳಿತ ಸಮಿತಿಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಗ್ರಾ.ಪಂ. ಸದಸ್ಯ ಸೋಮನಾಥ್, ರಜ್ಹಕ್ ಉಚ್ಚಿಲಪ್ರಮುಖರಾದ ಅಶೋಕ್ ಶೆಣೈ, ಹನೀಫ್, ರಾಜರಾಮ್ ಮಯ್ಯ ಮುಂತಾದವರಿದ್ದರು.

Related posts

Leave a Reply